ಶ್ರೀಲಂಕಾ ನೌಕಾ ಪಡೆಯಿಂದ 24 ಬೆಸ್ತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಮಾ.5– ಭಾರತ ಮತ್ತು ಶ್ರೀಲಂಕಾ ಜಲಗಡಿಯಲ್ಲಿ ತಮಿಳುನಾಡು ಬೆಸ್ತರು ಮತ್ತು ದ್ವೀಪರಾಷ್ಟ್ರದ ನೌಕಾಪಡೆ ನಡುವೆ ಸಂಘರ್ಷ ಮುಂದುವರಿದಿದೆ. ಅಂತಾರಾಷ್ಟ್ರೀಯ ಜಲಗಡಿ ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ನೌಕಾಪಡೆ ಸಿಬ್ಬಂದಿ 24 ಬೆಸ್ತರನ್ನು ಬಂಧಿಸಿದ್ದಾರೆ.  ಕಚ್ಚತೀವು ಮತ್ತು ತಲೈ ಮನ್ನಾರ್ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ 15 ಬೆಸ್ತರನ್ನು ಬಂಧಿಸಲಾಗಿದ್ದು, ಅವರನ್ನು ತಲೈ ಮನ್ನಾರ್‍ಗೆ ಕರೆದೊಯ್ಯಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕುಳಂಜಿನಾಥನ್ ತಿಳಿಸಿದ್ದಾರೆ. ಬಂಧಿತ ಇತರ 9 ಮೀನುಗಾರರನ್ನು ಕಾಂಗಸನ್ ತುರೈಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜಗದಪಟ್ಟಣಂ ಮತ್ತು ರಾಮೇಶ್ವರದ ಈ ಬೆಸ್ತರು ನಾಲ್ಕು ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin