ಅಮೆರಿಕದಲ್ಲಿ ಭಾರತೀಯ ಯುವಕ ಸಂಶಯಾಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dead-Body-b--------m

ನ್ಯೂಯಾರ್ಕ್, ಮಾ.6-ಜನಾಂಗೀಯ ದ್ವೇಷದ ದಳ್ಳುರಿಗೆ ಕಳೆದ 10 ದಿನಗಳ ಅವಧಿಯಲ್ಲಿ ಇಬ್ಬರು ಕಗ್ಗೊಲೆಯಾಗಿ, ಮತ್ತೊಬ್ಬನ ಮೇಲೆ ಗುಂಡಿನ ದಾಳಿ ನಡೆದ ಅತಂಕದ ನಡುವೆ ಅಮೆರಿಕದ ನ್ಯೂಜೆರ್ಸಿಯಲ್ಲಿ 29 ವರ್ಷದ ಭಾರತೀಯ ಮೂಲದ ಯುವಕನೊಬ್ಬನ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಆದರೆ ಇದು ಜನಾಂಗೀಯ ದ್ವೇಷಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಕುಟುಂಬ ಸ್ಪಷ್ಟಪಡಿಸಿದೆ.   ನ್ಯೂಜೆರ್ಸಿಯಲ್ಲಿ ಕಳೆದ ವಾರ ಯುವಕನೊಬ್ಬ ಶಂಕಾಸ್ಪದವಾಗಿ ಮೃತಪಟ್ಟಿದ್ದು ಆತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಮಸ್ಸಾಚುಸೆಟ್ಸ್‍ನಲ್ಲಿರುವ ಮೃತನ ತಂದೆಯೊಂದಿಗೆ ಭಾರತೀಯ ರಾಜತಾಂತ್ರಿಕ ಕಚೇರಿ ಅಧಿಕಾರಿಗಳು ಮಾತನಾಡಿದ್ದು ಇದೊಂದು ಕೌಟುಂಬಿಕ ವಿಚಾರದ ದುರಂತ ಎಂದು ಅವರು ಹೇಳಿದ್ದಾಗಿ ತಿಳಿದುಬಂದಿದೆ ಎಂದು ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin