ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವುದು ಜನರ ಜವಾಬ್ದಾರಿ : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

kr-nagar2

ಕೆ.ಆರ್.ನಗರ, ಮಾ.6- ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿ ಕೆಲಸಗಳಿಗೆ ಹಣನೀಡಲಾಗುತ್ತದೆ. ಕಾಮಕಾರಿಗಳು ಹಾಳಗದಂತೆ ನೋಡಿಕೊಳ್ಳುವುದು ಸಾರ್ವಜನಿಕರ ಜವಾಬ್ದಾರಿ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.ತಾಲೂಕಿನ ದೊಡ್ಡೆಕೊಪ್ಪಲು ಗ್ರಾಮದಲ್ಲಿ 2.50 ಕೋಟಿ ರೂ. ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಚುನಾಯಿತ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ಅಭಿವೃದ್ಧಿ ಕಾಮಗಾರಿಗೆ ಹಣ ನೀಡಲು ಸಾಧ್ಯವಿಲ್ಲ. ಸರ್ಕಾರದ ಹಣ ಸದುಪಯೋಗವಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅಗತ್ಯ. ಪ್ರತಿಯೊಬ್ಬರು ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಅಥವಾ ಚುನಾಯಿತ ಜನ ಪ್ರತಿನಿಧಿಗಳಿಗೆ ದೂರು ನೀಡಬೇಕೆಂದು ಸಲಹೆ ನೀಡಿದರು.

ಈ ಗ್ರಾಮದ ಜನರ ಅನುಕೂಲಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಬಿಸಲಾಗುತ್ತದೆ. ಅನುದಾನದ ಲಭ್ಯತೆಯ ಆಧಾರದ ಮೇರೆಗೆ ಸಾರ್ವಜನಿಕ ಕೆಲಸ ಮಾಡಲಿದ್ದೇವ ಎಂದರು.ಡೋರ್ನಹಳ್ಳಿ ಸಂತ ಅಂತೋಣಿ ಚರ್ಚ್‍ನ ಪಾದರ್ ಡಾ.ಆರೋಗ್ಯಸ್ವಾಮಿ, ತಾ.ಪಂ.ಸದಸ್ಯ ಬಿ.ಎಂ.ಮಹದೇವ್, ಗ್ರಾ.ಪಂ. ಸದಸ್ಯ ಬಸವರಾಜನಾಯಕ, ಸಂತ ಅಂತೋಣಿ ಕಾಲೇಜಿನ ಪಾಂಶುಪಾಲ ವಿಜಯಕುಮಾರ್, ಮುಖಂಡ ಜೀವಿಯರ್, ಪಿಡಿಒ ಅನಿತಾ, ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಡಿ.ಪ್ರಸಾದ್, ಗುತ್ತಿಗೆದಾರ ಅಶ್ವಥ್ ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin