ಚಾಲಕನ ನಿಯಂತ್ರಣ ತಪ್ಪಿ ಜೀಪು ಅಪಘಾತ ನಾಲ್ವರಿಗೆ ಗಂಭೀರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಎಚ್.ಡಿ.ಕೋಟೆ, ಮಾ.6-ಚಾಲಕನ ನಿಯಂತ್ರಣ ತಪ್ಪಿ ಜೀಪು ಅಪಘಾತವಾದ ಪರಿಣಾಮ ಅದರಲ್ಲಿದ್ದ ಏಳು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಜ್ವಾರಳ್ಳಿ ಬಳಿ ನಡೆದಿದೆ.ತೀವ್ರ ಸ್ವರೂಪವಾಗಿ ಗಾಯಗೊಂಡಿರುವ ರಾಣಿ (45), ಶಿವಣ್ಣ (50), ಉಮೇಶ (28), ಸುವರ್ಣಮ್ಮ (42) ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಸಣ್ಣಸ್ವಾಮಿ (45), ಜಯಮ್ಮ (50), ರೇವಮ್ಮ(40) ಅವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದ ನಂತರ ಜೀಪ್ ಚಾಲಕ ಪರಾರಿಯಾಗಿದ್ದಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin