ಡಬ್ಬಿಂಗ್ ವಿರೋಧಿಸಿ ತೀವ್ರಗೊಂಡ ಹೋರಾಟ : ಕನ್ನಡ ಚಿತ್ರರಂದ ಮಹತ್ವದ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Kannada-Film-Dubbing--01

ಬೆಂಗಳೂರು, ಮಾ.6-ಡಬ್ಬಿಂಗ್ ವಿರೋಧಿಸಿ ಹೋರಾಟವನ್ನು ತೀವ್ರಗೊಳಿಸಿರುವ ಕನ್ನಡ ಒಕ್ಕೂಟ ಇಂದು ಕನ್ನಡ ಚಲನಚಿತ್ರ ನಟ-ನಟಿಯರು, ಕಿರುತೆರೆ ಕಲಾವಿದರು, ಕಾರ್ಮಿಕರು, ನಿರ್ಮಾಪಕರು, ನಿರ್ದೇಶಕರು ಮುಂತಾದವರೊಂದಿಗೆ ಮಹತ್ವದ ಸಭೆ ನಡೆಸಿದೆ. ಕನ್ನಡ ಒಕ್ಕೂಟದ ಮುಖಂಡರಾದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕನ್ನಡ ಸೇನೆ ಕೆ.ಆರ್.ಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‍ಕುಮಾರ್‍ಶೆಟ್ಟಿ, ಚಲನಚಿತ್ರ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಸಂಜನಾ, ಬುಲೆಟ್ ಪ್ರಕಾಶ್, ನಿರ್ಮಾಪಕರ ಸಂಘದ ವಾಸು ಸೇರಿದಂತೆ ಅನೇಕ ಮುಖಂಡರು ಇಂದು ಸಭೆ ನಡೆಸಿ ಯಾವುದೇ ಕಾರಣಕ್ಕೂ ಕನ್ನಡ ನೆಲದಲ್ಲಿ ಡಬ್ಬಿಂಗ್ ಕಾಲಿಡಬಾರದು ಎಂದು ಆಗ್ರಹಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಡಬ್ಬಿಂಗ್ ವಿರೋಧಿಸಿ ಮಾ.9 ರಂದು ಮೈಸೂರು ಬ್ಯಾಂಕ್ ವೃತ್ತದಿಂದ ಚಲನಚಿತ್ರ ವಾಣಿಜ್ಯ ಮಂಡಳಿವರೆಗೆ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಹಿರಿ-ಕಿರಿ ತೆರೆ ಕಲಾವಿದರು, ಕಾರ್ಮಿಕರು, ಚಲನಚಿತ್ರರಂಗದ ಗಣ್ಯರು ಪಾಲ್ಗೊಂಡು ರ್ಯಾಲಿ ಯಶಸ್ವಿಗೊಳಿಸುವ ಮೂಲಕ ಡಬ್ಬಿಂಗ್ ಭೂತವನ್ನು ಓಡಿಸಬೇಕೆಂದು ಕರೆ ನೀಡಿದರು.  ಡಬ್ಬಿಂಗ್ ಜಾರಿಯಾಗುವುದರಿಂದ ನಮ್ಮ ಕಲಾವಿದರು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗುತ್ತದೆ. ಕಳೆದ ಎಂಟು ದಶಕಗಳಿಂದ ನಾವು ಡಬ್ಬಿಂಗ್‍ನ್ನು ವಿರೋಧಿಸುತ್ತಾ ಬಂದಿದ್ದೇವೆ. ಈಗ ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳು ಬಿಡುಗಡೆಯಾಗಲು ಬಿಡುವುದಿಲ್ಲ. ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.  ತಾರಾ ಅನುರಾಧ, ಬುಲೆಟ್ ಪ್ರಕಾಶ್ ಮತ್ತಿತರರು ಮಾತನಾಡಿ, ಡಬ್ಬಿಂಗ್ ವಿರೋಧಿ ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin