ಪರಿಸರ ಅನೈರ್ಮಲ್ಯದಿಂದ ವರ್ಷಕ್ಕೆ 1.7 ದಶಲಕ್ಷ ಮಕ್ಕಳ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Childrens-Dead

ನವದೆಹಲಿ, ಮಾ.6-ಪರಿಸರ ಅನೈರ್ಮಲ್ಯದಿಂದ ಪ್ರತಿ ವರ್ಷ ಐದು ವರ್ಷದೊಳಗಿನ 1.7 ದಶಲಕ್ಷ ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವ ಅರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ತಿಳಿಸಿದೆ. ಒಂದು ತಿಂಗಳಿನಿಂದ ಐದು ವರ್ಷಗಳವರೆಗಿನ ಮಕ್ಕಳ ಸಾವಿಗೆ ಅನಾರೋಗ್ಯ ಪರಿಸರವೂ ಒಂದು ಪ್ರಮುಖ ಕಾರಣ ಎಂಬ ಸಂಶೋಧನೆಗಳಿಗೆ ಇದು ಪುಷ್ಠಿ ನೀಡಿದೆ.   ಪರಿಸರ ಅನೈರ್ಮಲ್ಯ ಮತ್ತು ಮಾಲಿನ್ಯವು ವಿಶೇಷವಾಗಿ ಪುಟ್ಟ ಮಕ್ಕಳಿಗೆ ಅತ್ಯಂತ ಮಾರಕವಾಗಿದೆ ಎಂದು ಡಬ್ಲ್ಯುಎಚ್‍ಒ ಮಹಾನಿರ್ದೇಶಕರಾದ ಡಾ. ಮಾರ್ಗರೇಟ್ ಚಾನ್ ತಿಳಿಸಿದ್ದಾರೆ. ಕಲುಷಿತ ಗಾಳಿ ಮತ್ತು ನೀರು ಮಕ್ಕಳ ಅಂಗಾಂಗಗಳು ಮತ್ತು ರೋಗ ಪ್ರತಿರೋಧಕ ವ್ಯವಸ್ಥೆಗಳಿಗೆ ಹಾನಿಕರವಾಗಿ ಪರಿಣಮಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಸುರಕ್ಷಿತ ನೀರು, ಅನೈರ್ಮಲ್ಯ, ಕಳಪೆ ಸ್ವಚ್ಚತಾ ವಿಧಾನಗಳು ಹಾಗೂ ಒಳಾಂಗಣ ಮತ್ತು ಹೊರಾಂಗಣ ಮಾಲಿನ್ಯಗಳು ಐದು ವರ್ಷದ ಒಳಗಿನ ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತವೆ ಎಂದು ಅವರು ವಿವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin