ಹಳೆ ನೋಟು ಠೇವಣಿಗೆಕೆ ಅವಕಾಶ ನೀಡುತ್ತಿಲ್ಲ..? : ಕೇಂದ್ರ, ಆರ್‍ಬಿಐಗೆ ಸುಪ್ರೀಂ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಮಾ.6-ಅಮಾನ್ಯಗೊಂಡ ಹಳೆ ನೋಟುಗಳನ್ನು ಮಾರ್ಚ್ 31ರವರೆಗೆ ಠೇವಣಿಯಾಗಿಡಲು ಗ್ರಾಹಕರಿಗೆ ಏಕೆ ಅವಕಾಶ ನೀಡುತ್ತಿಲ್ಲ ಎಂಬ ಬಗ್ಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‍ಗೆ ಸುಪ್ರೀಂಕೋರ್ಟ್ ಇಂದು ನೋಟಿಸ್‍ಗಳನ್ನು ಜಾರಿಗೊಳಿಸಿದೆ.   ನೀಡಿದ ಭರವಸೆಯಂತೆ ಅಮಾನ್ಯಗೊಂಡ ನೋಟುಗಳನ್ನು ಮಾರ್ಚ್ 31, 2017ರವರೆಗೆ ಠೇವಣಿಯಾಗಿಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಸಂಬಂಧ   ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠ ವಿಚಾರಣೆ ನಡೆಸಿತು.

ಈ ಬಗ್ಗೆ ಪ್ರತ್ಯುತ್ತರ ನೀಡುವಂತೆ ಕೇಂದ್ರ ಮತ್ತು ಆರ್‍ಬಿಐಗೆ ನೋಟಿಸ್‍ಗಳನ್ನು ಜಾರಿಗೊಳಿಸಿದ ನ್ಯಾಯಾಲಯವು, ಮಾ.10ರಂದು ಪ್ರಕರಣದ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin