ಎಟಿಎಂ ಹಲ್ಲೆಕೋರ ಮಧುಕರ್‍ರೆಡ್ಡಿ 8 ದಿನ ಪೊಲೀಸ್ ಕಸ್ಟಡಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Madhukar-Reddy-ATM

ಬೆಂಗಳೂರು, ಮಾ.7- ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಮಧುಕರ್‍ರೆಡ್ಡಿಯನ್ನು ನ್ಯಾಯಾಲಯ ಎಂಟು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ. ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ಮೂರು ವರ್ಷಗಳ ನಂತರ ಸೆರೆ ಸಿಕ್ಕಿದ ಆರೋಪಿಯನ್ನು ಎಸ್‍ಜೆ ಪಾರ್ಕ್ ಪೊಲೀಸರು ಬಾಡಿ ವಾರೆಂಟ್ ಮೇಲೆ ಆಂಧ್ರ ಪೊಲೀಸರಿಂದ ವಶಕ್ಕೆ ಪಡೆದು ಇಂದು 6ನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.  ಆರೋಪಿಯು ಎಟಿಎಂನಲ್ಲಿ ಜ್ಯೋತಿ ಉದಯ್ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಸಂಬಂಧ ತಪ್ಪೊಪ್ಪಿಗೆ  ಹೇಳಿಕೆ ನೀಡಿದ್ದು, ಸ್ಥಳ ಮಹಜರು ಬಾಕಿ ಇರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಕೋರಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಾಘವೇಂದ್ರ ಅವರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮಾ.14ರ ವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಕಾರ್ಪೊರೇಷನ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮೂರು ವರ್ಷಗಳ ಹಿಂದೆ ಕಾರ್ಪೊರೇಷನ್ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್ ಅವರು ಹಣ ಡ್ರಾ ಮಾಡುವಾಗ ಅವರ ಮೇಲೆ ಆರೋಪಿ ಮಧುಕರ್ ರೆಡ್ಡಿ ಮಾರಣಾಂತಿಕ ಹಲ್ಲೆ ಮಾಡಿ ಹಣ, ಎಟಿಎಂ ಕಸಿದು ಪರಾರಿಯಾಗಿದ್ದ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin