ಭಾರತೀಯ ಮೀನುಗಾರರ ಮೇಲೆ ಲಂಕಾ ನೌಕಾಪಡೆ ದಾಳಿ, ಓರ್ವ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Tamil-Fishermen-Srilanka

ರಾಮೇಶ್ವರಂ, ಮಾ.7- ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಮೀನುಗಾರ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡಿದ್ದಾನೆ.
ಓರ್ವ ಮೀನುಗಾರನ ಕುತ್ತಿಗೆಗೆ ಗುಂಡು ತಗುಲಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವ ಮೀನುಗಾರ ಸರವಣನ್ ಎಂಬಾತನ ಕಾಲಿಗೂ ಗುಂಡೇಟು ತಗುಲಿದೆ. ಲಂಕಾ ಸೈನಿಕರ ದಿರ್ಢೀ ದಾಳಿಯಿಂದಾಗಿ ರಾಮೇಶ್ವರಂ ಉದ್ವಿಗ್ನಗೊಂಡಿದ್ದು, ಲಂಕಾ ಸೈನಿಕರ ಕೃತ್ಯಕ್ಕೆ ತಮಿಳುನಾಡಿನಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಮೇಶ್ವರಂ ಸಮೀಪದ ಬಂಗಾಳಕೊಲ್ಲಿಯಲ್ಲಿ 30 ಮೀನುಗಾರರು ಡೀಸೆಲ್ ಬೋಟ್ ನಲ್ಲಿ ರಾತ್ರಿ ಮೀನುಗಾರಿಕೆಗೆ ತೆರಳಿದ್ದರು. ಕರಾವಳಿಯ ಧನುಷ್ಕೋಟಿ ಬಳಿ ಲಂಕಾ ಸೇನೆ ಯಾವುದೇ ಎಚ್ಚರಿಕೆ ನೀಡದೆ, ಗುಂಡಿನ ದಾಳಿ ನಡೆಸಿದೆ. ಮೀನುಗಾರರು ದಡಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.  ಬ್ರಿಡಗೋ ಹಾಗೂ ಮತ್ತೊಬ್ಬ ಶರವಣನ್ ಇಬ್ಬರು ನಿನ್ನೆ ಕಚತೀವು ದ್ವಿಪದ ಸಮೀಪ ಮೀನುಗಾರಿಕೆಯಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಲಂಕಾ ನೌಕಾಪಡೆ ಸಿಬ್ಬಂದಿ ಇಬ್ಬರ ಮೇಲೂ ಏಕಾಏಕಿ ಗುಂಡಿನ ದಾಳಿ ನಡೆಸಿದೆ ಎಂದು ಮಿನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಚತೀವು ದ್ವಿಪದ ಸುತ್ತಮುತ್ತ 2 ಸಾವಿರಕ್ಕೂ ಹೆಚ್ಚು ಜನ ಮೀನುಗಾರಿಕೆ ನಡೆಸುತ್ತಿದ್ದಾರೆ. ಇವರೆಲ್ಲರೂ ಭಾರತದ ವ್ಯಾಪ್ತಿಯಲ್ಲೇ ಮೀನುಗಾರಿಕೆಯಲ್ಲಿ ತೊಡಗಿರುತ್ತಾರೆ. ಆದರೆ, ಲಂಕಾ ಪಡೆ ಯಾವುದೇ ಎಚ್ಚರಿಕೆ ನೀಡದೆ ಈ ದಾಳಿ ನಡೆಸಿದೆ ಎಂದು ರಾಮೇಶ್ವರಂ ಮೀನುಗಾರಿಕೆ ಸಂಘದ ಅಧ್ಯಕ್ಷ ಪಿ. ಸೇಸುರಾಜ್ ಆರೋಪಿಸಿದ್ದಾರೆ.. ಪ್ರಕರಣ ಸಂಬಂಧ ರಾಮೇಶ್ವರಂನ ಜೆಟ್ಟಿ ಪೊಲೀಸ್ ನಿಲ್ದಾಣದಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಅಧಿಕಾರಿಗಳು ಪ್ರಧಾನಿ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಇಲಾಖೆಗೆ ಮಾಹಿತಿ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin