ವಿಮಾನದಿಂದಲೇ ಅಂತರಿಕ್ಷಕ್ಕೆ ರಾಕೆಟ್‍ಗಳನ್ನು ಉಡಾಯಿಸಲು ಮುಂದಾದ ಚೀನಾ

ಈ ಸುದ್ದಿಯನ್ನು ಶೇರ್ ಮಾಡಿ

Rocke

ಶಾಂಘೈ, ಮಾ.7-ಉಪಗ್ರಹ ಉಡಾವಣಾ ಕೇಂದ್ರದಿಂದ ರಾಕೆಟ್‍ಗಳನ್ನು ಉಡ್ಡಯನ ಮಾಡುವುದು ಸಾಮಾನ್ಯ. ಆದರೆ ವಿಮಾನದಿಂದಲೇ ಅಂತರಿಕ್ಷಕ್ಕೆ ರಾಕೆಟ್‍ಗಳನ್ನು ಹಾರಿಬಿಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಲು ಚೀನಾ ಯೋಜನೆ ರೂಪಿಸಿದೆ.    ಸೇನೆ, ವಾಣಿಜ್ಯ ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಬಾಹ್ಯಾಕಾಶ ಕಕ್ಷೆಗೆ ಅನೇಕ ಉಪಗ್ರಹಗಳನ್ನು ಕಳುಹಿಸುವ ಗುರಿಯನ್ನು ಚೀನಾ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಚೀನಾ ಮಾಧ್ಯಮವೊಂದು ತಿಳಿಸಿದೆ.

100 ಕೆಜಿ ತೂಕದ ಘನ-ಇಂಧನ ರಾಕೆಟ್‍ನ್ನು ಕೆಳ ಭೂ ಕಕ್ಷೆಗೆ ಉಡಾವಣೆ ಮಾಡಲು ಚೀನಾ ಆಕಾಡೆಮಿ ಆಫ್ ಲಾಂಚ್ ವೆಹಿಕಲ್ ಟೆಕ್ನಾಲಜಿ ವಿನ್ಯಾಸಗೊಳಿಸಿದೆ. ಇದನ್ನು ಹಾರುತ್ತಿರುವ ವಿಮಾನದಿಂದಲೇ ಹಾರಿ ಬಿಡಬಹುದು ಎಂದು ಸಂಸ್ಥೆಯ ಕ್ಯಾರಿಯರ್ ರಾಕ್ಟ್ ಅಭಿವೃದ್ದಿ ವಿಭಾಗದ ಮುಖ್ಯಸ್ಥ ಲಿ ಟಾಂಗ್‍ಯು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin