ಸಾವು ಗೆದ್ದ ಬಾಲಕ ವಿಧಿಯಾಟದ ಮುಂದೆ ಕೊನೆಗೂ ಸೋತ…!

ಈ ಸುದ್ದಿಯನ್ನು ಶೇರ್ ಮಾಡಿ

6

ಹುಬ್ಬಳ್ಳಿ,ಮಾ.7- ಸ್ಮಶಾನಕ್ಕೆ ಕೊಂಡೊಯ್ಯುವಾಗ ಸಾವನ್ನು ಗೆದ್ದ ಬಾಲಕ ಕೊನೆಗೂ ವಿಧಿಯಾಟದ ಮುಂದೆ ಸೋತು ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.  ಫೆ. 19ರಂದು ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯದಲ್ಲಿ ತೇಲಿಸಿತಾದರೂ ಇಂದು ಅದೇ ಜನ ಬಾಲಕನ ಸಾವಿನ ಸುದ್ದಿ ಕೇಳಿ ಮರಗುತ್ತಿದ್ದಾರೆ. ಕುಮಾರ್ ಮರಡಿ (16) ಅಚ್ಚರಿ ರೀತಿಯಲ್ಲಿ ಬದುಕಿದ ಬಾಲಕನಾಗಿದ್ದುಹುಬ್ಬಳ್ಳಿಯ ಮನೆಯೊಂದರಲ್ಲಿ ಗಾರೆ ಕೆಲಸ ಮಾಡುವಾಗ ಬೀದಿ ನಾಯಿ ಕಚ್ಚಿತ್ತು. ಸೂಕ್ತ ಚಿಕಿತ್ಸೆ ಪಡೆಯದ ಕಾರಣ ಅದು ನಂಜಾಗಿ ಮಾರ್ಪಟ್ಟು ಮೂರ್ಛೆ ಹೋಗಿದ್ದರು.

ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಹಿನ್ನಲೆಯಲ್ಲಿ ವೈದ್ಯರು ಕುಮಾರನನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು.ಬಾಲಕನ ಉಸಿರಾಟ ಮತ್ತು ನಾಡಿ ಮಿಡಿತ ನಿಂತಿರುವುದನ್ನು ಗಮನಿಸಿ ಮೃತಪಟ್ಟಿದ್ದಾನೆಂದು ಭಾವಿಸಿದ ಪಾಲಕರು ಅಂತ್ಯ ಸಂಸ್ಕಾರಕ್ಕೆ ಗ್ರಾಮದಲ್ಲಿ ಸಿದ್ಧತೆ ಮಾಡಿಕೊಂಡಿದ್ದರು. ದೇಹವನ್ನು ಸ್ಮಶಾನಕ್ಕೆ ಸಾಗಿಸುವಾಗ ಮತ್ತೆ ಉಸಿರಾಟ ಆರಂಭಿಸಿದ್ದ ಕುಮಾರ್ ಎಲ್ಲರನ್ನು ಅಚ್ಚರಿಗೊಳಪಡಿಸಿದ್ದರು.ಕೂಡಲೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಸುಚಿರಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಹದಿನೈದು ದಿನಗಳ ನಂತರ ಕುಮಾರ್ ಸಾವನ್ನಪ್ಪಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin