ಸಿಡಿಲು ಬಡಿದು 9 ಮೇಕೆಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Rain-Esdgasdfhg

ಚೇಳೂರು, ಮಾ.7- ಸಿಡಿಲು ಹೊಡೆತಕ್ಕೆ ಸಿಕ್ಕಿ 9 ಮೇಕೆಗಳು ಸಾವನ್ನಪ್ಪಿರುವ ಘಟನೆ ಹೋಬಳಿಯ ಅನುಪನಕುಂಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಭೀಮಯ್ಯ ಎಂಬುವವರಿಗೆ ಸೇರಿದ 15 ಮೇಕೆಗಳನ್ನು ಆತನ ಹೆಂಡತಿ ಕರಿಯಮ್ಮ ತನ್ನ ಜಮೀನಿನ ಹತ್ತಿರ ಹೊಡೆದುಕೊಂಡು ಹೋಗಿದ್ದರು. ನಿನ್ನೆ ಸಂಜೆ ಬಿರುಗಾಳಿ ಮಳೆ ಪ್ರಾರಂಭವಾಗಿ ಮೇಕೆಗಳು ಚೆಲ್ಲಾಪಿಲ್ಲಿಯಾಗಿ ಓಡಿ ಕರಿಯಮ್ಮ ಒಂದು ಮರದ ಕೆಳಗೆ ಕೆಲವು ಮೇಕೆಗಳೊಂದಿಗೆ ನಿಂತಿದ್ದರು.   ಮತ್ತೊಂದು ಮರದ ಕೆಳಗಿದ್ದ 9 ಮೇಕೆಗಳು ಸಿಡಿಲಿಗೆ ಬಲಿಯಾಗಿವೆ. ಇದರಿಂದ 80 ಸಾವಿರ ರೂ. ನಷ್ಟವಾಗಿದೆ. ಸುದ್ದಿ ತಿಳಿದ ತಕ್ಷಣ ಚೇಳೂರು ಪಿಎಸ್‍ಐ ಎಫ್.ಕೆ.ನದಾಫ್ ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin