ಮುದ್ದು ಮಾಡುತ್ತಾ ವೃದ್ಧೆಯ ಮುದ್ದಿನ ನಾಯಿಯನ್ನೇ ಕದ್ದೊಯ್ದರು..?

ಈ ಸುದ್ದಿಯನ್ನು ಶೇರ್ ಮಾಡಿ
Sog--01
ಸಾಂಧರ್ಭಿಕ ಚಿತ್ರ

ಚನ್ನಪಟ್ಟಣ,ಮಾ.8– ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ವೃದ್ಧೆಯೊಬ್ಬರ ಬಳಿಯಿದ್ದ ನಾಯಿಮರಿಯನ್ನು ಮುದ್ದಿಸುವ ನೆಪದಲ್ಲಿ ಅಪಹರಿಸಿರುವ ಘಟನೆ ನಗರದ ಕೋಟೆಯ ವರದರಾಜಸ್ವಾಮಿ ದೇವಾಲಯದ ಬಳಿ ನಡೆದಿದೆ. ಕೋಟೆ ವಾಸಿ ಶಿವರಾಮು ಅವರ ಪತ್ನಿ ಚಿಕ್ಕತಾಯಮ್ಮ ಅವರು ನಾಯಿ ಕಳೆದುಕೊಂಡವರು.   ನಿನ್ನೆ ಮಧ್ಯಾಹ್ನ ಮುದ್ದಾದ ಹಚ್ ತಳಿಯ ನಾಯಿಯನ್ನು ಹೊರಗೆ ಕರೆದುಕೊಂಡು ಹೋಗಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ವೃದ್ಧೆಯನ್ನು ಮಾತನಾಡಿಸಿದ್ದಾರೆ.  ನಂತರ ಮುದ್ದು ಮಾಡುವ ನೆಪದಲ್ಲಿ ನಾಯಿ ಮರಿಯನ್ನು ಎತ್ತಿಕೊಂಡು ಬಂದಿದ್ದ ವಾಹನದಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕ ತಾಯಮ್ಮ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin