ವಿದ್ಯಾ ಬಾಲನ್ ಅಭಿನಯದ ‘ಬೇಗಂ ಜಾನ್’ ಚಿತ್ರದ ಫಸ್ಟ್ ಲುಕ್ ಔಟ್

ಈ ಸುದ್ದಿಯನ್ನು ಶೇರ್ ಮಾಡಿ

4

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟಿ ವಿದ್ಯಾ ಬಾಲನ್ ಅಭಿನಯದ ಬೇಗಂ ಜಾನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟ್ ರ್‍ನಲ್ಲಿ ಬೇಗಂ ಜಾನ್ (ಘರ್‍ವಾಲಿ ಅಥವಾ ವೇಶ್ಯಾಗೃಹದ ಒಡತಿ) ಪಾತ್ರಕ್ಕೆ ಜೀವ ತುಂಬಿದಂತೆ ಕಾಣುತ್ತಾಳೆ ವಿದ್ಯಾ. 38 ವರ್ಷದ ನಟಿ ತಾನು ಅಭಿನಯಿಸಿರುವ ಸಿನಿಮಾದ ಪೋಸ್ಟ ರ್‍ನನ್ನು ಟ್ವೀಟರ್‍ನಲ್ಲಿ ಪೋಸ್ಟ  ಮಾಡಿದ್ದಾಳೆ. ಗಾಗ್ರಾ ಮತ್ತು ಡೀಪ್ ಕಟ್ ಚೋಲಿ ಧರಿಸಿ ಕೈಯಲ್ಲಿ ಹುಕ್ಕಾ ಪೈಪ್ ಹಿಡಿದು ಐಷಾರಾಮಿ ಮರದ ಕುರ್ಚಿಯಲ್ಲಿ ಕುಳಿತು ಮಾದಕವಾಗಿ ಪೋಸ್ ನೀಡಿರುವ ವಿದ್ಯಾ ಈ ಪೋಸ್ಟ ರ್‍ಗೆ ಆಕರ್ಷಕ ಅಡಿ ಬರಹವನ್ನೂ ನೀಡಿದ್ದಾಳೆ.

ನಾನು ಬರುತ್ತಿದ್ದೇನೆ ಎಂದು ವಿದ್ಯಾ ಟ್ವೀಟ್ ಮಾಡಿದ್ದಾಳೆ. ಮೈ ಬಾಡಿ, ಮೈ ಹೌಸ್, ಮೈ ಕಂಟ್ರಿ, ಮೈ ರೂಲ್ಸ್ (ನನ್ನ ದೇಹ, ನನ್ನ ಮನೆ, ನನ್ನ ಹಳ್ಳಿ, ನನ್ನ ಕಾರುಬಾರು) ಎಂಬ ಟ್ಯಾಗ್‍ಲೈನ್ ಪೋಸ್ಟ ರ್‍ನಲ್ಲಿದೆ. ಶ್ರೀಜಿತ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಮಹೇಶ್ ಭಟ್ ನಿರ್ಮಿಸಿದ್ದಾರೆ. ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ನಡೆಯುವ ಘಟನೆಯೊಂದರ ಸುತ್ತ ಹೆಣೆದ ಈ ಕಥೆಯ ವಾಸ್ತವ ಸಂಗತಿಯನ್ನು ಆಧರಿಸಿದೆ. ಏಪ್ರಿಲ್ 24ರಂದು ಬೇಗಂ ಜಾನ್ ತೆರೆ ಮೇಲೆ ಮಿಂಚಲಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin