ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಆಸ್ಪತ್ರೆಗೆ ದಾಖಲು, ಐಸಿಯುನಲ್ಲಿ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Parvatamm-Rajkumar

ಬೆಂಗಳೂರು. ಮಾ.08 : ಅನಾರೋಗ್ಯದ ಕಾರಣ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್(77) ಅವರನ್ನು ನಿನ್ನೆ ಮಧ್ಯರಾತ್ರಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಾರ್ವತಮ್ಮ ಅವರು ತೀವ್ರ ಅಸ್ವಸ್ಥರಾಗಿದ್ದು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಕ್ಕರೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಮಧ್ಯರಾತ್ರಿ 12 ಸುಮಾರಿಗೆ ಮನೆಯಲ್ಲೇ ತಲೆಸುತ್ತು ಕಾಣಿಸಿಕೊಂಡಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಪಾರ್ವತಮ್ಮನವರನ್ನ ಕೂಡಲೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಮೊಮ್ಮಗ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುತ್ರ ಶಿವರಾಜ್ ಕುಮಾರ್, ಪತ್ನಿ ಗೀತಾ, ಪುನೀತ್ ರಾಜ್‍ಕುಮಾರ್, ಮಗಳು ಲಕ್ಷ್ಮಿ, ಸೊಸೆ ಮಂಗಳ, ಮೊಮ್ಮಗ ಗುರು ರಾಘವೇಂದ್ರ ಕೂಡ ಆಸ್ಪತ್ರೆಗೆ ಬಂದು ಪಾರ್ವತಮ್ಮನವ್ರ ಆರೋಗ್ಯ ವಿಚಾರಿಸಿದರು .   ಮಧ್ಯರಾತ್ರಿಯೇ ಎಂಆರ್‍ಐ ಸ್ಕ್ಯಾನ್, ಹಲವು ರಕ್ತ ಪರೀಕ್ಷೆ ನಡೆಸಿದ್ದು ಅವರ ಆರೋಗ್ಯ ಸುಧಾರಿಸುತ್ತಿದೆ ಎನ್ನಲಾಗಿದೆ. ಪಾರ್ವತಮ್ಮ ರಾಜ್‍ಕುಮಾರ್ ಅವರು ಕೆಲವು ದಿನಗಳಿಂದ ರಕ್ತದ ಒತ್ತಡ ಕಡಿಮೆಯಾಗಿ,ಶುಗರ್ ನಿಂದ ಬಳಲುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin