ಅನೈತಿಕ ಸಂಬಂಧ ಪತಿ : ಕಲಬುರಗಿಯ ಕೈಲಾಸ ನಗರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಮಾ.8-ಕಲಬುರಗಿಯ ಕೈಲಾಸನಗರದಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಬುರಗಿ ತಾಲ್ಲೂಕಿನ ಕಣ್ಣಿ ಗ್ರಾಮದ ಪ್ರೀತಿ(31) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ.ಕಳೆದ ರಾತ್ರಿ ಅನೈತಿಕ ಸಂಬಂಧ ಪ್ರಶ್ನಿಸಿ ಪತಿ ಶಿವರುದ್ರಪ್ಪನ ಜೊತೆ ಜಗಳವಾಡಿದ್ದ ಪ್ರೀತಿ ಮನನೊಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಪೋಷಕರು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಗಂಡನೇ ಕೊಲೆ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. 2002ರಲ್ಲಿ ಅದೇ ಗ್ರಾಮದ ಶಿವರುದ್ರಪ್ಪನ ಜೊತೆ ಮದುವೆಯಾಗಿತ್ತು. ಮಹಿಳಾ ಪೊಲೀಸ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin