ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-03-2017)

ಈ ಸುದ್ದಿಯನ್ನು ಶೇರ್ ಮಾಡಿ

 

ನಿತ್ಯ ನೀತಿ  : ಭಿಕ್ಷಾನ್ನವೇ ಆಹಾರ, ಆ ನೀರಸವಾದ ಆಹಾರವೂ ಒಂದು ಹೊತ್ತು. ಭೂಮಿಯೇ ಹಾಸಿಗೆ. ತನ್ನ ದೇಹದ ಅಂಗಾಗಗಳೇ ಸೇವಕರು. ನೂರು ಚೂರುಗಳಿಂದ ಕೂಡಿದ ಹಳೆಯ ಕಂತೆಯೇ ಬಟ್ಟೆ. ಅಯ್ಯೋ..! ಹಾಗಾದರೂ ಮನಸ್ಸು ವಿಷಯ ಸುಖಗಳ ಆಸೆಯನ್ನು ಬಿಡುವುದಿಲ್ಲ.  – ವೈರಾಗ್ಯಶತಕ

Rashi

ಪಂಚಾಂಗ : ಗುರುವಾರ , 09.03.2017

ಸೂರ್ಯ ಉದಯ ಬೆ.06.31 / ಸೂರ್ಯ ಅಸ್ತ  ಸಂ.06.30
ಚಂದ್ರ ಉದಯ ಮ.03.43 / ಚಂದ್ರ ಅಸ್ತ ರಾ.04.38
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ರಾ.09.40) / ನಕ್ಷತ್ರ: ಪುಷ್ಯ  (ಸಾ.05.12)
ಯೋಗ: ಶೋಭನ  (ಬೆ.08.59) / ಕರಣ: ಭವ-ಬಾಲವ  (ಬೆ.10.12-ರಾ.09.40)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಕುಂಭ / ತೇದಿ: 26

ರಾಶಿ ಭವಿಷ್ಯ :

ಮೇಷ : ವೈವಾಹಿಕ ಸಂಬಂಧಗಳು ಕೂಡಿ ಬರಲಿವೆ, ತಾಳ್ಮೆ, ಸಹನೆ ಅಗತ್ಯವಿದೆ, ಆರೋಗ್ಯದ ಬಗ್ಗೆ ಗಮನಹರಿಸಿ
ವೃಷಭ : ಗೃಹ ನಿರ್ಮಾಣ, ವಾಹನ ಖರೀದಿಯಲ್ಲಿ ಆಸಕ್ತಿ
ಮಿಥುನ: ನಿರೀಕ್ಷಿತ ಕಾರ್ಯಗಳು ಅಚ್ಚರಿ ರೀತಿಯಲ್ಲಿ ನಡೆಯ ಲಿವೆ, ಆರ್ಥಿಕವಾಗಿ ಖರ್ಚು-ವೆಚ್ಚಗಳಲ್ಲಿ ಮಿತಿ ಇರಲಿ
ಕಟಕ : ರಾಜಕೀಯ ವರ್ಗದವರಿಗೆ ನಿರೀಕ್ಷಿತ ಕಾರ್ಯಸಾಧನೆ ಸಂತೃಪ್ತಿ
ಸಿಂಹ: ವ್ಯಾಪಾರ-ವ್ಯವಹಾರಗಳ ಮಾತುಕತೆಗಳು ಮುನ್ನಡೆ ತರುತ್ತವೆ
ಕನ್ಯಾ: ಸಾಂಸಾರಿಕವಾಗಿ ಮಕ್ಕಳಿಂದ ಶುಭಫಲ ಕಾಣುವಿರಿ
ತುಲಾ: ಹಿಡಿದ ಕೆಲಸ-ಕಾರ್ಯ ಗಳನ್ನು ಮುಂದುವರಿಸಿರಿ
ವೃಶ್ಚಿಕ : ನೂತನ ಕೆಲಸ-ಕಾರ್ಯ ಗಳಲ್ಲಿ ಮುನ್ನಡೆ ಸಾಧಿಸುವಿರಿ
ಧನುಸ್ಸು: ನ್ಯಾಯಾಲಯದ ಕೆಲಸ-ಕಾರ್ಯಗಳು ನಿಮ್ಮಪರವಾಗಿ ನೆರವೇರಲಿವೆ
ಮಕರ: ಧನಾಗಮನದಿಂದ ಸರ್ವಕಾರ್ಯಗಳಿಗೆ ಅನುಕೂಲವಾಗಲಿದೆ, ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ
ಕುಂಭ: ದೇವತಾ ಕಾರ್ಯಗಳಿಗಾಗಿ ಓಡಾಟ, ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿ ಸಂತಸವಾಗುವುದು
ಮೀನ: ಅವಿವಾಹಿತರಿಗೆ ನಿರಾಸೆ ಉಂಟಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin