ಉಕ್ರೇನ್ ರಾಜಧಾನಿ ಕೀವ್ ಮೃಗಾಲಯದಲ್ಲಿ ಹಾಲೋವೀನ್ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ
ಉಕ್ರೇನ್ ರಾಜಧಾನಿ ಕೀವ್ ಮೃಗಾಲಯದಲ್ಲಿ ಪ್ರಾಣಿಗಳಿಂದ ಹಾಲೋವಿನ್‍ನನ್ನು (ಮೃತರನ್ನು ನೆನೆಸಿಕೊಳ್ಳುವ ದಿನ) ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪ್ರಾಣಿ ಪಕ್ಷಿಗಳ ಔತಣಕ್ಕಾಗಿ ಕೆತ್ತನೆ ಮಾಡಿದ ಅಲಂಕೃತ ಕುಂಬಳಕಾಯಿಗಳು ಮತ್ತು ಮಾಂಸಾಹಾರವನ್ನು ನೀಡಲಾಯಿತು. ಕೀವ್ ಮೃಗಾಲಯದಲ್ಲಿರುವ ನಾಲ್ಕು ಹುಲಿಗಳಿಗೆ ಹಾಲೋವೀನ್ ಆಚರಣೆಯ ಸಂಭ್ರಮಕ್ಕಾಗಿ ಐದು ಕಿಲೋ ಮಾಂಸದ ಊಟವನ್ನು ಒದಗಿಸಲಾಗಿತ್ತು. ಕುಂಬಳಕಾಯಿಗಳ ಒಳಗೆ ಪ್ರಾಣಿಗಳಿಗೆ ಇಷ್ಟವಾದ ಆಹಾರಗಳು ತುಂಬಿಸಿದ್ದೇವು. ಪ್ರಾಣಿಗಳು ಇದನ್ನು ತುಂಬಾ ಇಷ್ಟಪಟ್ಟು ತಿಂದವು ಎಂದು ಮೃಗಾಲಯದ ಫೋಟೋಗ್ರಾಫರ್ ಬೊಗ್‍ಡಾನ್ ಶುಲ್‍ಸ್ಕೀ ತಿಳಿಸಿದರು. ಪ್ರಾಣಿಗಳು ಹಾಲೋವಿನ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದನ್ನು ನೋಡಿ ಮಕ್ಕಳು ಪುಳಕಿತರಾದರು. ಮೃಗಾಲಯ ಪಾಲಕರು ಕರಡಿಗಳಿಗಾಗಿ ವಿಶೇಷ ಸಸ್ಯಾಹಾರ ಊಟವನ್ನು ಸಿದ್ಧಪಡಿಸಿದ್ದರು. ಹಣ್ಣುಗಳು, ತರಕಾರಿಗಳು, ಜೇನು ಇವುಗಳನ್ನು ಮಿಶ್ರಣ ಮಾಡಿ ಕುಂಬಳಕಾಯಿಗಳ ಜೊತೆ ಇಲ್ಲಿರುವ ಚಿಪ್ ಮತ್ತು ಡೆಲ್ ಕರಡಿಗಳಿಗೆ ನೀಡಲಾಯಿತು ಎಂದು ಝೂಕೀಪರ್ ಗಾನ್ನಾ ಗುರಿಚ್ ಹೇಳಿದರು. ಪ್ರಾಣಿಗಳು ಆಟವಾಡುತ್ತಾ ಸುಗ್ರಾಸ ಭೋಜನವನ್ನು ಚಪ್ಪರಿಸುವ ದೃಶ್ಯಗಳು ಮಕ್ಕಳಿಗೆ ಮುದ ನೀಡಿದವು. ಮೃಗಾಲಯದಲ್ಲಿರುವ ಹೊರೆಸ್ ಹೆಸರಿನ ಒಂದು ಆನೆಯು ಸಹ ಕುಂಬಳಕಾಯಿ ರುಚಿ ನೋಡಿತು. 1909ರಲ್ಲಿ ಸ್ಥಾಪಿಸಲಾದ ಕೀವ್ ಮೃಗಾಲಯದಲ್ಲಿ 369 ಪ್ರಬೇಧಗಳ 3,000ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ.
ಉಕ್ರೇನ್ ರಾಜಧಾನಿ ಕೀವ್ ಮೃಗಾಲಯದಲ್ಲಿ ಪ್ರಾಣಿಗಳಿಂದ ಹಾಲೋವಿನ್‍ನನ್ನು (ಮೃತರನ್ನು ನೆನೆಸಿಕೊಳ್ಳುವ ದಿನ) ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪ್ರಾಣಿ ಪಕ್ಷಿಗಳ ಔತಣಕ್ಕಾಗಿ ಕೆತ್ತನೆ ಮಾಡಿದ ಅಲಂಕೃತ ಕುಂಬಳಕಾಯಿಗಳು ಮತ್ತು ಮಾಂಸಾಹಾರವನ್ನು ನೀಡಲಾಯಿತು. ಕೀವ್ ಮೃಗಾಲಯದಲ್ಲಿರುವ ನಾಲ್ಕು ಹುಲಿಗಳಿಗೆ ಹಾಲೋವೀನ್ ಆಚರಣೆಯ ಸಂಭ್ರಮಕ್ಕಾಗಿ ಐದು ಕಿಲೋ ಮಾಂಸದ ಊಟವನ್ನು ಒದಗಿಸಲಾಗಿತ್ತು. ಕುಂಬಳಕಾಯಿಗಳ ಒಳಗೆ ಪ್ರಾಣಿಗಳಿಗೆ ಇಷ್ಟವಾದ ಆಹಾರಗಳು ತುಂಬಿಸಿದ್ದೇವು. ಪ್ರಾಣಿಗಳು ಇದನ್ನು ತುಂಬಾ ಇಷ್ಟಪಟ್ಟು ತಿಂದವು ಎಂದು ಮೃಗಾಲಯದ ಫೋಟೋಗ್ರಾಫರ್ ಬೊಗ್‍ಡಾನ್ ಶುಲ್‍ಸ್ಕೀ ತಿಳಿಸಿದರು. ಪ್ರಾಣಿಗಳು ಹಾಲೋವಿನ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದನ್ನು ನೋಡಿ ಮಕ್ಕಳು ಪುಳಕಿತರಾದರು. ಮೃಗಾಲಯ ಪಾಲಕರು ಕರಡಿಗಳಿಗಾಗಿ ವಿಶೇಷ ಸಸ್ಯಾಹಾರ ಊಟವನ್ನು ಸಿದ್ಧಪಡಿಸಿದ್ದರು. ಹಣ್ಣುಗಳು, ತರಕಾರಿಗಳು, ಜೇನು ಇವುಗಳನ್ನು ಮಿಶ್ರಣ ಮಾಡಿ ಕುಂಬಳಕಾಯಿಗಳ ಜೊತೆ ಇಲ್ಲಿರುವ ಚಿಪ್ ಮತ್ತು ಡೆಲ್ ಕರಡಿಗಳಿಗೆ ನೀಡಲಾಯಿತು ಎಂದು ಝೂಕೀಪರ್ ಗಾನ್ನಾ ಗುರಿಚ್ ಹೇಳಿದರು.ಪ್ರಾಣಿಗಳು ಆಟವಾಡುತ್ತಾ ಸುಗ್ರಾಸ ಭೋಜನವನ್ನು ಚಪ್ಪರಿಸುವ ದೃಶ್ಯಗಳು ಮಕ್ಕಳಿಗೆ ಮುದ ನೀಡಿದವು. ಮೃಗಾಲಯದಲ್ಲಿರುವ ಹೊರೆಸ್ ಹೆಸರಿನ ಒಂದು ಆನೆಯು ಸಹ ಕುಂಬಳಕಾಯಿ ರುಚಿ ನೋಡಿತು. 1909ರಲ್ಲಿ ಸ್ಥಾಪಿಸಲಾದ ಕೀವ್ ಮೃಗಾಲಯದಲ್ಲಿ 369 ಪ್ರಬೇಧಗಳ 3,000ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳಿವೆ.
Facebook Comments

Sri Raghav

Admin