ಕದ್ದ ಚಿನ್ನವನ್ನು ಸೇಫಾಗಿಡಲು ದರೋಡೆಕೋರರು ಕಂಡುಕೊಂಡಿದ್ದಾರೆ ಹೊಸ ತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Gold-Loan

ನವದೆಹಲಿ, ಮಾ.9-ದರೋಡೆಕೋರರು ಹಣ ಗಳಿಸಲು ಅನೇಕ ವಾಮಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ರಾಜಧಾನಿ ನವದೆಹಲಿಯ ಕ್ರಿಮಿನಲ್‍ಗಳ ಮಾರ್ಗ ವಿಭಿನ್ನವಾಗಿದೆ. ಚಿನ್ನದ ಮೇಲೆ ಸಾಲ ನೀಡುವ ಕಂಪೆನಿಗಳು ನಾಯಿಕೊಡೆಗಳಂತೆ ತಲೆ ಎತ್ತಿರುವುದು ದರೋಡೆಕೋರರಿಗೆ ವರದಾನವಾಗಿದೆ. ಹೇಗೆ ?   ಮಧ್ಯರಾತ್ರಿ ನಂತರ ಮನೆಗಳಿಗೆ ನುಗ್ಗುವ ದರೋಡೆಕೋರರು ಕುಟುಂಬದ ಸದಸ್ಯರುಗಳನ್ನು ಬೆದರಿಸಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿರುವ ಪ್ರಕರಣ ದೆಹಲಿಯಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ತಾವು ದರೋಡೆ-ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಕಂಪನಿಗಳಲ್ಲಿ ಠೇವಣಿಯಾಗಿಟ್ಟು ದರೋಡೆಕೋರರು ಸಾಲ ಪಡೆಯುತ್ತಾರೆ. ತಾವು ದೋಚಿದ ಚಿನ್ನವೂ ಇಂಥ ಸಂಸ್ಥೆಗಳಲ್ಲಿ ಸುರಕ್ಷಿತವಾಗಿರುತ್ತದೆ ಹಾಗೂ ತಮಗೆ ಅಗತ್ಯವಾದ ನಗದು ಸಾಲದ ರೂಪದಲ್ಲಿ ಲಭಿಸುತ್ತದೆ.

ಹೀಗೆ ಒಂದೇ ಕೃತ್ಯದಿಂದ ಎರಡು ಲಾಭ ಪಡೆಯುತ್ತಿರುವ ಕಿಲಾಡಿ ದರೋಡೆಕೋರರು ದೆಹಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದಾರೆ. ಕಳೆವ ವರ್ಷ ಡಿಸೆಂಬರ್‍ನಿಂದ ದಕ್ಷಿಣ ಮತ್ತು ವಾಯುವ್ಯ ದೆಹಲಿಯಲ್ಲಿ 24 ಮನೆಗಳಲ್ಲಿ ಚಿನ್ನಾಭರಣಗಳು ದರೋಡೆಯಾಗಿವೆ ಇಲ್ಲವೇ ಕಳ್ಳತನವಾಗಿವೆ. ಒಂದು ವಾರದಲ್ಲಿ ಕನಿಷ್ಠ ಎರಡು ಮನೆಗಳಲ್ಲಿ ಇಂಥ ಕೃತ್ಯಗಳು ಮರುಕಳಿಸುತ್ತಿವೆ.
ಪೊಲೀಸ್ ಇಲಾಖೆಯ ದರೋಡೆ ನಿಗ್ರಹ ದಳದೊಂದಿಗೆ ಇಲ್ಲಿನ ನಿವಾಸಿಗಳು ರಾತ್ರಿ ಪಹರೆ ಆರಂಭಿಸಿದ್ದಾರೆ. ಖಾಲಿ ಮನೆಗಳಿಗೆ ಬೀಗ ಹಾಕಿ ಅದರಲ್ಲಿ ಪೊಲೀಸರು ಅವಿತು ದರೋಡೆಕೋರರಿಗಾಗಿ ಕಾದು ಕುಳಿತ್ತಿದ್ದರು. ಎಸಿಪಿ ರಾಜೇಂದರ್ ಸಿಂಗ್ ಮತ್ತು ಇನ್ಸ್‍ಪೆಕ್ಟರ್ ವಿಜಯ್ ಚಂದೆಲ್ ನೇತೃತ್ವದ ತಂಡ ಕೊನೆಗೂ ಮೂವರು ದರೋಡೆಕೋರರನ್ನು ಬಂಧಿಸಿದರು. ಈ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಾವು ಚಿನ್ನಾಭರಣಗಳನ್ನು ದರೋಡೆ ಮಾಡಿ ಅವುಗಳನ್ನು ಬ್ಯಾಂಕ್‍ಗಳಲ್ಲಿಟ್ಟು ಸಾಲ ಪಡೆಯುತ್ತವೆ ಎಂದು ಮಾಹಿತಿ ನೀಡಿದರು. ಅವರ ಮಾಹಿತಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin