ಕಾಳಧನಿಕರಿಗೆ ಐಟಿ ಶಾಕ್ : ಅಘೋಷಿತ ಆದಾಯಕ್ಕೆ ಶೇ.77.25ರಷ್ಟು ತೆರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

IT-Sjoc

ನವದೆಹಲಿ, ಮಾ.9-ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿ ಪ್ರಾಮಾಣಿಕವಾಗಿ ತಮ್ಮ ಆದಾಯವನ್ನು ಘೋಷಿಸುವಂತೆ ಆದಾಯ ತೆರಿಗೆ ಇಲಾಖೆ (ಐಟಿ) ಕಾಳಧನಿಕರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಬಹಿರಂಗಗೊಳಿಸದ ಅಘೋಷಿತ ಆದಾಯಕ್ಕೆ ಶೇ.77.25ರಷ್ಟು ತೆರಿಗೆ, ಸರ್‍ಚಾರ್ಜ್ ಮತ್ತು ಕರಗಳನ್ನು ಸೇರಿದ ಮೊತ್ತವನ್ನು ವಿಧಿಸಲಾಗುತ್ತದೆ. ಜೊತೆಗೆ ದಂಡ ಪಾವತಿಸಬೇಕಾಗುತ್ತದೆ ಮತ್ತು ಶಿಕ್ಷೆಯನ್ನೂ ವಿಧಿಸಲಾಗುತ್ತದೆ ಎಂದು ಐಟಿ ತಿಳಿಸಿದೆ.   ಈ ಕುರಿತು ಇಂದು ದೇಶದ ಎಲ್ಲ ಪ್ರಮುಖ ದಿನಪತ್ರಿಕೆಗಳಲ್ಲಿ ಈ ಸಂಬಂಧ ಜÁಹೀರಾತು ಪ್ರಕಟಗೊಂಡಿದ್ದು, ನಿಮ್ಮ ಬೆರಳು ಗುರುತುಗಳಂತೆ ನಿಮ್ಮ ಕಪ್ಪು ಹಣ ನಮ್ಮನ್ನು ನಿಮ್ಮ ಬಳಿಗೆ ಕರೆದು ತರುತ್ತದೆ. ಆದಾಯ ತೆರಿಗೆ ಇಲಾಖೆ ಮುಂದಿನ ಯೋಜನೆಯಡಿ ನಿಮ್ಮ ಪೂರ್ಣ ಮತ್ತು ಪ್ರಾಮಾಣಿಕ ಆದಾಯವನ್ನು ಘೋಷಣೆ ಮಾಡಿಕೊಳ್ಳಿ ಎಂದು ಎಚ್ಚರಿಕೆ ನೀಡಲಾಗಿದೆ.

31ನೇ ಮಾರ್ಚ್, 2017ರೊಳಗೆ ವರಮಾನವನ್ನು ಘೋಷಣೆ ಮಾಡಿಕೊಂಡು ಶುದ್ಧವಾಗಿರಿ ಮತ್ತು ಕೆಳಸ್ತರದ ಜನರಿಗೆ ಸಹಾಯ ಮಾಡಿ ಎಂದು ಐಟಿ ತಿಳಿಸಿದೆ.   ನಗದು ಅಥವಾ ಬ್ಯಾಂಕ್ ಅಥವಾ ಅಂಚೆ ಕಚೇರಿ ಅಥವಾ ನಿರ್ದಿಷ್ಟ ವಿಧಾನದೊಂದಿಗೆ ಮಾಡಿದ ಜಮೆಯ ರೂಪದಲ್ಲಿರುವ ಆದಾಯದ ಬಗ್ಗೆ ಯಾವುದೇ ವ್ಯಕ್ತಿ ಘೋಷಣೆ ಮಾಡಬಹುದಾಗಿದೆ.
ಅಘೋಷಿತ ಆದಾಯದ ಶೇ.49.90ರಷ್ಟು ಮೊತ್ತದವರೆಗಿನ ಮೊಬಲಗನ್ನು ತೆರಿಗೆ, ಸರ್‍ಚಾರ್ಜ್ ಮತ್ತು ದಂಡವಾಗಿ ಪಾವತಿಸಬೇಕಾಗುತ್ತದೆ. ಶೇ. 25ರಷ್ಟು ಅಘೋಷಿತ ಆದಾಯದಲ್ಲಿನ ಮೊತ್ತವನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಕಡ್ಡಾಯವಾಗಿ ಠೇವಣಿಯಾಗಿರಬೇಕಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin