ಡಬ್ಬಿಂಗ್ ವಿರೋಧಿ ಬೃಹತ್ ಪ್ರತಿಭಟನಾ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

Dubbing--01
ಬೆಂಗಳೂರು, ಮಾ.9- ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಭುಗಿಲೆದ್ದಿರುವ ಡಬ್ಬಿಂಗ್ ಭೂತದ ವಿರುದ್ಧ ಕನ್ನಡ ಒಕ್ಕೂಟ ಕರೆ ಕೊಟ್ಟಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಕನ್ನಡಪರ ಸಂಘಟನೆಗಳು, ಹಿರಿ-ಕಿರುತೆರೆ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಕಾರ್ಮಿಕರು ಪಾಲ್ಗೊಂಡಿದ್ದರು.   ಕನ್ನಡ ಒಕ್ಕೂಟದ ಮುಖಂಡರು, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್‍ವರೆಗೆ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಡಬ್ಬಿಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ, ಕನ್ನಡಸೇನೆ ಕೆ.ಆರ್.ಕುಮಾರ್, ಸಾರ್ವಜನಿಕ ಜಾಗೃತಿ ವೇದಿಕೆ ಮಂಜುನಾಥ್ ದೇವು, ಗಿರೀಶ್‍ಗೌಡ, ಶಿವರಾಮೇಗೌಡ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು, ಕಲಾವಿದರಾದ ತಬಲ ನಾಣಿ, ರವಿಶಂಕರ್, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ವಾಸು ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು, ಕನ್ನಡಪರ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಡಬ್ಬಿಂಗ್ ವಿರೋಧಿಸಿದರು.

Dubbing--02

ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಡಬ್ಬಿಂಗ್‍ನಿಂದ ಕನ್ನಡ ಚಲನಚಿತ್ರೋದ್ಯಮ ಸರ್ವನಾಶವಾಗುತ್ತದೆ. ಡಬ್ಬಿಂಗ್ ಭೂತವನ್ನು ನಾವು ಓಡಿಸಲೇಬೇಕಾಗಿದೆ. ಡಬ್ಬಿಂಗ್ ಚಿತ್ರಗಳು ಪ್ರದರ್ಶನವಾಗಲು ಪ್ರಾರಂಭವಾದರೆ ಕಾರ್ಮಿಕರು ಬೀದಿ ಪಾಲಾಗಬೇಕಾಗುತ್ತದೆ. ಎಂಟು ದಶಕಗಳಿಂದ ಡಬ್ಬಿಂಗ್ ವಿರೋಧಿಸಿ ಮಾಡುತ್ತಿದ್ದ ಹೋರಾಟಕ್ಕೆ ಯಾವುದೇ ಬೆಲೆ ಇಲ್ಲದಂತಾಗುತ್ತದೆ. ಎಲ್ಲರೂ ಕೂಡ ಡಬ್ಬಿಂಗ್ ವಿರೋಧಿ ಹೋರಾಟಕ್ಕೆ ಕೈ ಜೋಡಿಸಬೇಕು. ಚಲನಚಿತ್ರ ಮಾಲೀಕರು, ಚಿತ್ರಮಂದಿರದ ಮಾಲೀಕರು ಡಬ್ಬಿಂಗ್ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ವಾಟಾಳ್ ಹೇಳಿದರು.

ಕನ್ನಡ ಸೇನೆ ಕುಮಾರ್, ಪ್ರವೀಣ್‍ಶೆಟ್ಟಿ ಮುಂತಾದವರು ಮಾತನಾಡಿ, ಡಬ್ಬಿಂಗ್ ಚಿತ್ರಗಳ ಪ್ರದರ್ಶನಕ್ಕೆ ಮುಂದಾದರೆ ಭಾರೀ ಹೋರಾಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಸಂಗೀತ ನಿರ್ದೇಶಕ ವಿ.ಮನೋಹರ್ ಮಾತನಾಡಿ, ಡಬ್ಬಿಂಗ್‍ಗೆ ಅವಕಾಶ ನೀಡಿದರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ನಟ-ನಟಿಯರು, ಉತ್ತಮ ಚಿತ್ರಗಳು ಮೂಡಿಬರುತ್ತಿವೆ. ನಮಗೆ ಡಬ್ಬಿಂಗ್ ಅವಶ್ಯಕತೆಯಿಲ್ಲ. ಒಂದು ವೇಳೆ ಡಬ್ಬಿಂಗ್ ಜಾರಿಯಾದರೆ ನಟ-ನಟಿಯರು, ತಂತ್ರಜ್ಞರು ಹಾಗೂ ಕಲಾವಿದರ ಕುಟುಂಬಗಳು ಬೀದಿ ಪಾಲಾಗಲಿವೆ ಎಂದು ಹೇಳಿದರು.

Dubbing--03

ನಿರ್ದೇಶಕ ವಾಸು ಮಾತನಾಡಿ, ನಾಡು-ನುಡಿ, ಸಂಸ್ಕøತಿಗೆ ಧಕ್ಕೆಯಾದರೆ ಹೋರಾಟಕ್ಕೆ ಬೆಂಬಲ ಸದಾ ಇರುತ್ತದೆ. ಈಗಾಗಲೇ ಡಬ್ಬಿಂಗ್ ವಿಚಾರವಾಗಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂದರು.  ಇತ್ತೀಚೆಗಷ್ಟೆ ಸತ್ಯದೇವ್ ಐಪಿಎಸ್ ಡಬ್ಬಿಂಗ್ ಚಿತ್ರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಆದರೆ, ಇದಕ್ಕೆ ಚಿತ್ರರಂಗದ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದು, ನೀರಸ ಪ್ರದರ್ಶನ ಕಂಡಿತ್ತು.  ಚಿತ್ರ ಪ್ರದರ್ಶನದ ವೇಳೆ ಕೇವಲ ಬೆರಳೆಣಿಕೆಯಷ್ಟು ಅಭಿಮಾನಿಗಳು ಮಾತ್ರ ಥಿಯೇಟರ್‍ನಲ್ಲಿ ನೋಡಿದರು. ಇದರಿಂದ ರಾಜ್ಯದ ಕನ್ನಡ ಅಭಿಮಾನಿಗಳ ವಿರೋಧವಿದೆ ಎಂದು ಸ್ಪಷ್ಟವಾಗುತ್ತದೆ.

ನಟ ಶಿವರಾಜ್‍ಕುಮಾರ್ ಡಬ್ಬಿಂಗ್‍ಗೆ ಜನರೇ ವಿರೋಧಿಸಿದ್ದಾರೆ. ಆದರೆ, ನಿರ್ಮಾಪಕರ ಗುಂಪೊಂದು  ಡಬ್ಬಿಂಗ್ ಪರವಾಗಿ ಕೆಲಸ ಮಾಡುತ್ತಿದೆ. ಹಿಂದಿನಿಂದಲೂ ಕನ್ನಡ ಚಿತ್ರರಂಗದ ನಟ-ನಟಿಯರು ಡಬ್ಬಿಂಗ್ ಬೇಡವೇ ಬೇಡ ಎಂದು ಹೇಳಿದ್ದಾರೆ. ಆದರೆ, ಈಗ ನಿರ್ಮಾಪಕರು ಡಬ್ಬಿಂಗ್ ಬೇಕು ಎಂದು ಒಳಗೊಳಗೆ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin