ಮಣಿಪುರದಲ್ಲಿ 34 ಮತ ಕೇಂದ್ರಗಳಲ್ಲಿ ಮರು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

Manipur--02

ಇಂಫಾಲ್, ಮಾ.9– ಈಶಾನ್ಯ ರಾಜ್ಯ ಮಣಿಪುರದ ಮೂರು ಜಿಲ್ಲೆಗಳ 34 ಮತ ಕೇಂದ್ರಗಳಲ್ಲಿ ಇಂದು ಭಾರೀ ಬಿಗಿ ಭದ್ರತೆ ನಡುವೆ ವಿಧಾನಸಭೆ ಚುನಾವಣೆಗೆ ಮರು ಮತದಾನವಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೇ ಚುನಾವಣಾ ಶಾಂತಿಯುತವಾಗಿ ನಡೆಯಿತು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   ಉತ್ಸಾಹಿ ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳಲ್ಲಿ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು. ಇಂಫಾಲ, ಚುರಾಚಾಂದ್‍ಪುರ್ ಮತ್ತು ಕಾಂಗ್‍ಪೊಕಿ ಜಿಲ್ಲೆಗಳನ್ನು ಮಾ.4ರಂದು ನಡೆದ ಮೊದಲ ಹಂತದ ಮತದಾನದ ವೇಳೆ 34 ಮತ ಕೇಂದ್ರಗಳಲ್ಲಿ ಚುನಾವಣಾ ಅಕ್ರಮಗಳು ನಡೆದು ಮರು ಮತದಾನಕ್ಕೆ ಆದೇಶಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin