ವಿಜಯ್ಮಲ್ಯ ಆಸ್ತಿಗಳ ಘೊಷಣೆ ಪ್ರಾಮಾಣಿಕವೇ..? ಸುಪ್ರೀಂ ಪ್ರಶ್ನೆ
ನವದೆಹಲಿ,ಮಾ.9- ಬಹುಕೋಟಿ ರೂ.ಗಳ ಸಾಲ ಎತ್ತುವಳಿ ಮಾಡಿ ಉದ್ದೇಶಪೂರ್ವಕ ಸುಪ್ತಿದಾರರಾಗಿ ಲಂಡನ್ಗೆ ಪಲಾಯನವಾಗಿರುವ ಕಳಂಕಿತ ಉದ್ಯಮಿ ಮದ್ಯದ ದೊರೆ ವಿಜಯ್ಮಲ್ಯ ಬಹಿರಂಗಗೊಳಿಸಿರುವ ಆಸ್ತಿ ಘೋಷಣೆ ಪ್ರಾಮಾಣಿಕವೇ ಎಂದು ಸುಪ್ರೀಂಕೋರ್ಟ್ ಇಂದು ಪ್ರಶ್ನಿಸಿದೆ. ಮಲ್ಯ ಬಾಕಿ ಉಳಿಸಿಕೊಂಡಿರುವ ಸಾಲದ ವಸೂಲಾತಿಗಾಗಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠ ಈ ಪ್ರಶ್ನೆ ಕೇಳಿದೆ.
Facebook Comments