ಹೆತ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ತಂದೆ ಬಂಧನ
ಚನ್ನಪಟ್ಟಣ, ಮಾ.8– ಹೆತ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಕಾಮುಕ ತಂದೆಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆತಾಲೂಕಿನ ವಿರೂಪಾಕ್ಷಿಪುರ ಗ್ರಾಮದ ಸತೀಶ್ (45) ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ತಂದೆ.ಸತೀಶನ ಪತ್ನಿ ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರೆಯಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು, ದಂಪತಿಯ ಇಬ್ಬರು ಹೆಣ್ಣು ಮಕ್ಕಳು ತಂದೆಯ ಬಳಿಯೇ ಇದ್ದಾರೆ.ಟ್ರ್ಯಾಕ್ಟರ್ ಚಾಲಕನಾಗಿರುವ ಸತೀಶ್ ಪತ್ನಿ ಬೇರೆಯಾದ ನಂತರದಿಂದ ಕುಡಿತದ ದಾಸನಾಗಿದ್ದು, ತನ್ನ ಮಕ್ಕಳೊಂದಿಗೆ ಕ್ರೌರ್ಯದಿಂದ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.ಕೆಲವು ದಿನಗಳ ಹಿಂದೆ ತನ್ನ ಕಿರಿಯ ಮಗಳು 7ನೆ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ತಂದೆಯಿಂದ ತಪ್ಪಿಸಿಕೊಂಡ ಬಾಲಕಿ ತನ್ನ ಸೋದರಮಾವನಿಗೆ ವಿಷಯ ತಿಳಿಸಿ ತಮ್ಮನ್ನು ರಕ್ಷಿಸುವಂತೆ ಕೋರಿದ್ದಾಳೆ. ವಿಚಾರ ತಿಳಿದ ಬಾಲಕಿಯ ಚಿಕ್ಕಮ್ಮ ಅಕ್ಕೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸತೀಶ್ನನ್ನು ಬಂಧಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS