ನಿರ್ಮಾಪಕ, ಕನ್ನಡಿಗ ನವೀನ್ ಜೊತೆ ನಟಿ ಭಾವನಾ ನಿಶ್ಚಿತಾರ್ಥ

ಈ ಸುದ್ದಿಯನ್ನು ಶೇರ್ ಮಾಡಿ

BHavana

ತಿರುವನಂತಪುರಂ.ಮಾ.10 : ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ, ಬಹುಭಾಷಾ ನಟಿ ಭಾವನಾ, ಕನ್ನಡ ಚಿತ್ರಗಳ ನಿರ್ಮಾಪಕ ನವೀನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕನ್ನಡಿಗ  ನಿರ್ಮಾಪಕ ನವೀನ್ ಜೊತೆ ನಟಿ ಭಾವನ ನಿಶ್ಚಿತಾರ್ಥ ಮಾಡಿಕೊಂಡಿದ್ದು,ಆಗಸ್ಟ್ ಅಥವಾ ಸೆಪ್ಟಂಬರ್’ನಲ್ಲಿ ವಿವಾಹ ನೆರವೇರಲಿದೆ. ಆಕೆಯ ಮನೆಯಲ್ಲಿಯೇ ನಡೆದ ಸರಳ ಸಮಾರಂಭದಲ್ಲಿ ಆಪ್ತ ಬಾಂಧವರನ್ನು ಮಾತ್ರ ಆಹ್ವಾನಿಸಲಾಗಿತ್ತು. ನಿರ್ಮಾಪಕ ಮಂಜು ವಾರಿಯರ್ 2012ರಲ್ಲಿ ಗಣೇಶ್ ಹಾಗೂ ಭಾವನ ಅಭಿನಯದ ರೋಮಿಯೊ ಚಿತ್ರ ನಿರ್ಮಿಸಿದ್ದರು.

30 ವರ್ಷದ ನಟಿ ಭಾವನ ಅನೇಕ ಕನ್ನಡ,ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಭಾವನಾ, ಕಿಚ್ಚ ಸುದೀಪ್ ಅವರೊಂದಿಗೆ ‘ವಿಷ್ಣುವರ್ಧನ’, ‘ಬಚ್ಚನ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.  ನಿರ್ಮಾಪಕ ಆಗುವ ಮೊದಲು ನವೀನ್ ಅವರು ನಟಿ ರಾಗಿಣಿ ದ್ವಿವೇದಿ ಅವರ ಜೊತೆ ‘ನಾಯಕ’ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಅದೊಂದೇ ಸಿನಿಮಾದಲ್ಲಿ ನವೀನ್ ನಟಿಸಿದ್ದು ಬಿಟ್ಟರೆ, ಬೇರೆ ಯಾವ ಸಿನಿಮಾಗಾಗಿಯೂ ನವೀನ್ ಬಣ್ಣ ಹಚ್ಚಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin