ಭಾರೀ ಭ್ರಷ್ಟಾಚಾರ : ದಕ್ಷಿಣ ಕೊರಿಯಾ ಅಧ್ಯಕ್ಷೆಯನ್ನು ವಜಾಗೊಳಿಸಿದ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

North-korea

ಸಿಯೋಲ್, ಮಾ.10-ವ್ಯಾಪಕ ಭ್ರಷ್ಟಾಚಾರ ಹಗರಣಗಳಲ್ಲಿ ಸಂಸತ್ತಿನಿಂದ ವಾಗ್ದಂಡನೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾ ಪ್ರಥಮ ಮಹಿಳಾ ಅಧ್ಯಕ್ಷೆ ಪಾರ್ಕ್ ಗಿಯ್ಯೂನ್-ಹೈ ಅವರನ್ನು ದೇಶದ ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ.   ಅಧ್ಯಕ್ಷರ ಭಾರೀ ಭ್ರಷ್ಟಾಚಾರ ಹಗರಣಗಳಿಂದ ಪ್ರಜಾಪ್ರಭುತ್ವದ ಮೂಲತತ್ತ್ವಕ್ಕೆ ಗಂಭೀರ ಧಕ್ಕೆಯಾಗಿದೆ ಎಂದು ತೀವ್ರ ವಿಷಾದ ವ್ಯಕ್ತಪಡಿಸಿರುವ ಸಾಂವಿಧಾನಿಕ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಲೀ ಜಂಗ್-ಮೀ, ಅಧ್ಯಕ್ಷೆ ಪಾರ್ಕ್ ಗಿಯ್ಯೂನ್-ಹೈ ಅವರನ್ನು ವಜಾಗೊಳಿಸಲಾಗಿದೆ ಎಂದು ಘೋಷಿಸಿದರು.  ಸ್ಯಾಮ್‍ಸಂಗ್‍ನಂಥ ಕಂಪನಿಗಳ ಹಗರಣ, ವಿಶ್ವವಿದ್ಯಾಲಯ ಪ್ರವೇಶಾತಿ ಲಂಚ ಪ್ರಕರಣ, ಉಡುಗೊರೆ ರೂಪದಲ್ಲಿ ಲಕ್ಷಾಂತರ ಡಾಲರ್ ಕುದುರೆ ಮತ್ತು ಇತರ ಅತ್ಯಂತ ಬೆಲೆ ಬಾಳುವ ವಸ್ತುಗಳನ್ನು ಪಡೆದ ಆರೋಪಗಳು ಹಾಗೂ ಭ್ರಷ್ಟಾಚಾರ ಆರೋಪ ಹೊತ್ತವರನ್ನು ರಕ್ಷಿಸಲು ನೀಲ ಭವನ (ಅಧ್ಯಕ್ಷರ ನಿವಾಸ) ದುರುಪಯೋಗ ಅಪಾದನೆಗಳು ಪಾರ್ಕ್ ಮೇಲಿದ್ದವು.

ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ಶಾಮೀಲಾದ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಹೊರ ಹಾಕಲು ಸಂಸತ್ತಿನಲ್ಲಿ ಪಾರ್ಕ್ ವಿರುದ್ಧ ಚಲಾವಣೆಯಾದ ಮತ ನಿರ್ಣಯವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ 60 ದಿನಗಳ ಒಳಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾಗುತ್ತದೆ. ರಾಜಕೀಯ ವಿದ್ಯಮಾನದಿಂದ ದಕ್ಷಿಣ ಕೊರಿಯಾ ನೂತನ ರಾಜಕೀಯ ಮನ್ವಂತರದತ್ತ ಹೆಜ್ಜೆ ಹಾಕಲಿದೆ. ಈ ಹಿಂದೆ ಪಾರ್ಕ್ ಅವರಿಗೆ ಪರಮ ನಿಷ್ಠರಾಗಿದ್ದ ಕನ್ಸರ್‍ವೇಟಿವ್‍ನ ಮೂನ್ ಜಾಯಿ-ಇನ್ ಮುಂದಿನ ರಾಷ್ಟ್ರಾಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin