ವೈದ್ಯರ ಮೇಲಿನ ಹಲ್ಲೆ ಪ್ರಕರಣ ತಡೆಗಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

13

ಬೆಳಗಾವಿ,ಮಾ.10- ವೈದ್ಯರ ಮೇಲೆ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ತಡೆಗಟ್ಟಿ, ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞ ವೈದ್ಯರ ತಂಡ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಇಂದು ಮನವಿ ಸಲ್ಲಿಸಿದರು.ಇತ್ತೀಚೆಗೆ ವೈದ್ಯರು, ಆಸ್ಪತ್ರೆ ಮತ್ತು ಅವರ ಮನೆಗಳ ಮೇಲೆ ವೈದ್ಯಕೀಯ ಉಪಚಾರದಲ್ಲಿ ವ್ಯತ್ಯಯ ಹೆಸರಲ್ಲಿ ದಾಳಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಡಾ. ಸ್ವಾತಿ ವೈದ್ಯ, ಡಾ. ಎಂ.ಸಿ. ಮೆಟಗುಡ್, ಡಾ. ಶ್ರೀದೇವಿ ಮೆಟಗುಡ್, ಡಾ. ಬಿ.ಆರ್. ದೇಸಾಯಿ ಸೇರಿದಂತೆ ವೈದ್ಯರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin