ಹಿರಿಯ ಪತ್ರಕರ್ತ ವೀರಯ್ಯ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

12

ಬೆಳಗಾವಿ,ಮಾ.10- ಬೆಳಗಾವಿಯ ಹಿರಿಯ ಪತ್ರಕರ್ತ ವೀರಯ್ಯ ಹೊಸಮಠ (65) ಅನಾರೋಗ್ಯ ದಿಂದ ಇಂದು ಬೆಳಗಿನ ಜಾವ ನಿಧನ ಹೊಂದಿದ್ದಾರೆ.ಮೃತರು 1974ರಲ್ಲಿ ನಗರದ ನಾಡೋಜ ದಿನಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿ ಲೋಕದರ್ಶನ, ಕನ್ನಡಮ್ಮ, ಸಂಯುಕ್ತ ಕರ್ನಾಟಕ, ಲೋಕದರ್ಶನ, ದಿನಪತ್ರಿಕೆಗಳಲ್ಲಿ ಜಿಲ್ಲೆಯ ಪತ್ರಿಕಾ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದು, ಸದ್ಯ ನಗರದ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಮೂಲತಃ ಗೋಕಾಕ್‍ನವರಾದ ಹೊಸಮಠ ಬೆಳಗಾವಿಯಲ್ಲಿ ವಾಸವಾಗಿದ್ದು, ಪ್ರಚಲಿತ ಎಂಬ ಹೆಸರಿನ ಸಂಜೆ ದಿನಪತ್ರಿಕೆಯನ್ನೂ ಅವರು ನಡೆಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಸಕ್ಕರೆ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin