ಛತ್ತೀಸ್‍ಗಢದಲ್ಲಿ ಮತ್ತೆ ನಕ್ಸಲೀಯರ ಅಟ್ಟಹಾಸ : 11 ಸಿಆರ್‍ಪಿಎಫ್ ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

chattisgar
ಸುಕ್ಮಾ(ಛತ್ತೀಸ್‍ಗಢ), ಮಾ.11- ನಕ್ಸಲೀಯರ ಅಟ್ಟಹಾಸ ಮತ್ತೆ ತೀವ್ರಗೊಂಡಿದ್ದು, ಬಂಡುಕೋರರು ನಡೆಸಿದ ಭೀಕರ ದಾಳಿಯಲ್ಲಿ ಸಿಆರ್‍ಪಿಎಫ್‍ನ 11 ಯೋಧರು ಹತರಾಗಿರುವ ಘಟನೆ ಛತ್ತೀಸ್‍ಗಢದ ನಕ್ಸಲ್ ಹಾವಳಿ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ 11 ಸಿಬ್ಬಂದಿಯನ್ನು ಬಲಿ ತೆಗೆದು ಕೊಂಡ ನಕ್ಸಲರು 10 ಶಸ್ತ್ರಾಸ್ತ್ರಗಳು, ರೆಡಿಯೋ ಸೆಟ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲರಿ ಅಡಗಿದ್ದಾರೆ ಎಂಬ  ಮಾಹಿತಿ ಮೇರೆಗೆ ಸಿಆರ್‍ಪಿಎಫ್‍ನ ಯೋಧರು ಆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆಗ ಹಠಾತ್ ದಾಳಿ ನಡೆಸಿದ ನಕ್ಸಲರು 11 ಯೋಧರನ್ನು ಹತ್ಯೆಗೈದು ರೈಫೆಲ್‍ಗಳು, ಮದ್ದುಗುಂಡುಗಳು ಮತ್ತು ವಾಕಿಟಾಕಿಗಳನ್ನು ದೋಚಿ ಪರಾರಿಯಾಗಿದ್ದಾರೆ.  ನಕ್ಸಲ್ ದಾಳಿಯಲ್ಲಿ ಕೆಲವು ಸಿಆರ್‍ಪಿಎಫ್ ಯೋಧರಿಗೆ ಗಾಯಗಳಾಗಿವೆ. ನಕ್ಸಲರ ಹತ್ಯಾಕಾಂಡದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹೆಚ್ಚುವರಿ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ಪ್ರಾರಂಭಿಸಿದ್ದಾರೆ.  ಕಳೆದ ವರ್ಷ ಜುಲೈ 19ರಂದು ಬಿಹಾರದ ಔರಂಗಬಾದ್‍ನ ಅರಣ್ಯ ಪ್ರದೇಶದಲ್ಲಿ ನಕ್ಸಲರ ಸೋಟಕ ದಾಳಿಗೆ ಸಿಆರ್‍ಪಿಎಫ್‍ನ ಕನಿಷ್ಠ 10 ಮಂದಿ ಕಮಾಂಡೋಗಳು ಹತರಾಗಿದ್ದರು. ನ.21ರಂದು ಛತ್ತೀಸ್‍ಗಢ ಸುಕ್ಮಾ ಜಿಲ್ಲೆಯಲ್ಲಿ ಬಾಂಬ್ ಸೋಟಿಸಿದ್ದ ನಕ್ಸಲರು ಓರ್ವ ಸಿಆರ್‍ಪಿಎಫ್ ಯೋಧನನ್ನು ಕೊಂದು ಇಬ್ಬರನ್ನು ಗಾಯಗೊಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin