ಮೃಗಾಲಯದಲ್ಲಿ ವೀಕ್ಷಕರತ್ತ ಮರದ ತುಂಡು ಎಸೆದ ಗೊರಿಲ್ಲಾ, ಗರ್ಭಿಣಿಗೆ ತೀವ್ರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Gorilla--01

ನ್ಯೂ ಓರ್ಲಿನ್ಸ್, ಮಾ.11-ರೊಚ್ಚಿಗೆದ್ದ ಗೊರಿಲ್ಲಾವೊಂದು ಮರದ ತುಂಡನ್ನು ವೀಕ್ಷಕರತ್ತ ಎಸೆದ ಪರಿಣಾಮ ಗರ್ಭಿಣಿಯೊಬ್ಬರು ತೀವ್ರ ಗಾಯಗೊಂಡಿರುವ ಘಟನೆ ಅಮೆರಿಕದ ನ್ಯೂ ಓರ್ಲಿನ್ಸ್ ಮೃಗಾಲಯದಲ್ಲಿ ನಡೆದಿದೆ. ಅಡುಬೊನ್ ಮೃಗಾಲಯದಲ್ಲಿ ನಡೆದ ಈ ಘಟನೆಯಿಂದ ಆರು ತಿಂಗಳ ಗರ್ಭಿಣಿ 34 ವರ್ಷದ ಸಿಲ್ವಿಯಾ ಕ್ರಿಸಿ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಮೃಗಾಲಯಕ್ಕೆ ಭೇಟಿ ನೀಡಿದ ಪ್ರೇಕ್ಷಕರ ಗುಂಪೊಂದು ಪ್ರಲೈನ್ ಹೆಸರಿನ ಹೆಣ್ಣು ಗೊರಿಲ್ಲಾ ಇದ್ದ ಸ್ಥಳಕ್ಕೆ ಬಂದಾಗ ಅದು ಹಠಾತ್ ಕೆರಳಿತು. ಇದರಿಂದ ಹೆದರಿ ದಿಕ್ಕಾಪಾಲಾಗಿ ಓಡುತ್ತಿದ್ದ ಜನರತ್ತ ಅದು ಮರದ ತುಂಡೊಂದನ್ನು ಎಸೆಯಿತು. ಇದರಿಂದ ಸಿಲ್ವಿಯಾ ತಲೆಗೆ ಅದು ಬಡಿದು ಸ್ಥಳದಲ್ಲೇ ಕುಸಿದು ಬಿದ್ದರು.

ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗೊರಿಲ್ಲಾ ಎಸೆದ ಮರದ ತುಂಡು ಕ್ಷಿಪಣಿಯಂತೆ ಅತ್ಯಂತ ವೇಗದಲ್ಲಿ ಆಕೆಯ ತಲೆಗೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಇದೊಂದು ಅನಿರೀಕ್ಷಿತ ಘಟನೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin