ತಾಯಿಯನ್ನು ನಿಂದಿಸಿದ್ದಕ್ಕೆ ಯುವಕರನ್ನು ಅರೆಬೆತ್ತಲೆಗೊಳಿಸಿ ಅಟ್ಟಾಡಿಸಿ ಹಲ್ಲೆ (Video)

ಈ ಸುದ್ದಿಯನ್ನು ಶೇರ್ ಮಾಡಿ

Naragunda

ನರಗುಂದ,ಮಾ.12- ತಾಯಿಯನ್ನು ನಿಂದಿಸಿದ ವಿಡಿಯೋ ನೋಡಿ ಕೋಪಗೊಂಡ ವ್ಯಕ್ತಿಯೊರ್ವ ಮೂವರು ಯುವಕರನ್ನು ಅರೆಬೆತ್ತಲೆಗೊಳಿಸಿ ಬೆಲ್ಟ್‍ನಿಂದ ಮಾರಣಾಂತಿಕವಾಗಿ ಥಳಿಸಿದ ಘಟನೆ ನಿನ್ನೆ ರಾತ್ರಿ ನಗರದಲ್ಲಿ ನಡೆದಿದ್ದು ಗಾಯಗೊಂಡ ಮೂವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತೆಗೆ ಸೇರಿಸಲಾಗಿದೆ. ಖಾದರ ಸಾಬ ಮಲ್ಲಸಮುದ್ರ, ಬಸವರಾಜ ಗಡೇಕರ್, ಸಂಜೀವ ನಲವಡಿ ಹಲ್ಲೆಗೊಳಗಾದ ಯುವಕರು.

ತಾಯಿಯನ್ನು ನಿಂದಿಸಿದ್ದನ್ನು ವಿಡಿಯೋದಲ್ಲಿ ನೋಡಿದ ತವನಪ್ಪ ಎಂಬುವವರು ಮೂವರು ಯುವಕರನ್ನು ಬೆಲ್ಟ್‍ನಿಂದ ರಸ್ತೆಯುದ್ದಕ್ಕೂ ಮನಬಂದಂತೆ ಥಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಗಂಭೀರವಾಗಿ ಗಾಯಗೊಂಡ ಮೂವರು ಕಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin