ವಾಹನ ಮೇಲ್ಭಾಗದಲ್ಲಿ ಎಗ್ಸಾಟ್‍(ಹೊಗೆ ನಳಿಗೆ) ಜೋಡಣೆಗೆ ಸುಪ್ರೀಂಕೋರ್ಟ್ ನಕಾರ

ಈ ಸುದ್ದಿಯನ್ನು ಶೇರ್ ಮಾಡಿ

exhaust

ನವದೆಹಲಿ, ಮಾ.12-ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಎಲ್ಲ ವಾಹನಗಳಲ್ಲಿ ಕೆಳಭಾಗದ ಬದಲು ಮೇಲ್ಭಾಗದಲ್ಲಿ ಎಗ್ಸಾಟ್‍ಗಳನ್ನು (ಹೊಗೆ ನಳಿಗೆ) ಜೋಡಿಸಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ನಿಮ್ಮ ಮನವಿಗೆ ಯಾವ ಆಧಾರವಿದೆ ಎಂಬುದನ್ನು ತಿಳಿಸಿ. ವಾಹನಗಳ ಹೊಗೆ ನಳಿಗೆ ಕೆಳಭಾಗದಲ್ಲಿ ಇದ್ದರೆ ಮಾಲಿನ್ಯ ಹೆಚ್ಚಾಗುತ್ತದೆ ಹಾಗೂ ಮೇಲ್ಭಾಗದಲ್ಲಿದ್ದರೆ ಪ್ರದೂಷಣೆ ಕಡಿಮೆಯಾಗುತ್ತದೆ ಎಂಬ ಬಗ್ಗೆ ಯಾವುದಾದರೂ ವೈಜ್ಞಾನಿಕ ಸಂಶೋಧನೆ ನಡೆದಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ನ್ಯಾಯಪೀಠ ಮನವಿದಾರರಿಗೆ ಪ್ರಶ್ನಿಸಿತು.

ಕೇರಳ ನಿವಾಸಿ ಸಬು ಸ್ಟೀಫನ್ ಎಂಬ ಅರ್ಜಿದಾರರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಟ್ರ್ಯಾಕ್ಟರ್‍ನಂಥ ಕೃಷಿ ವಾಹನಗಳಿಗೆ ಮೇಲ್ಭಾಗದಲ್ಲಿ ಹೊಗೆ ನಳಿಗೆಗಳನ್ನು ಅಳವಡಿಸಿಲಾಗಿದ್ದು, ಇದರಿಂದ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿ, ಎಲ್ಲ ವಾಹನಗಳಿಗೂ ಇದನ್ನು ಅನ್ವಯಿಸಲು ಆದೇಶ ನೀಡುವಂತೆ ಕೋರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin