ಸೂಡಾನ್ ಉಗ್ರರಿಂದ ಇಬ್ಬರು ಭಾರತೀಯ ಎಂಜಿನಿಯರ್‍ಗಳ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Sudan--01

ಕಂಪಾಲ(ಸೂಡಾನ್), ಮಾ.12- ಇಬ್ಬರು ಭಾರತೀಯ ಎಂಜಿನಿಯರ್‍ಗಳನ್ನು ತಾನು ಅಪಹರಿಸಿರುವುದಾಗಿ ದಕ್ಷಿಣ ಸೂಡಾನ್ ಬಂಡುಕೋರರ ಬಣ ಹೇಳಿದೆ. ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಇವರನ್ನು ಅಪಹರಿಸಲಾಗಿದೆ. ಪ್ರತಿಪಕ್ಷ ನಾಯಕ ರೀಕ್ ಮಚರ್ ಈ ಸಂಬಂಧ ನಿರ್ಧಾರ ಕೈಗೊಳ್ಳುವ ತನಕ ಭಾರತೀಯರನ್ನು ತಮ್ಮ ವಶದಲ್ಲಿ ಇಟ್ಟುಕೊಳ್ಳಲಾಗುವುದು ಎಂದು ವಿರೋಧಪಕ್ಷದ ವಕ್ತಾರ ವಿಲಿಯಂ ಗಟ್‍ಜಿಯಾತ್ ತಿಳಿಸಿದ್ಧಾರೆ.   ಒತ್ತೆ ಹಣ ಅಥವಾ ಇತರ ಬೇಡಿಕೆಗಳನ್ನು ನಾವು ಮುಂದಿಡುವುದಿಲ್ಲ. ಅದು ನಮ್ಮ ಉದ್ದೇಶವಲ್ಲ. ನಮ್ಮ ನಾಯಕರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡುವುದಾಗಿ ಬಂಡುಕೋರರ ಮತ್ತೊಬ್ಬ ವಕ್ತಾರ ಮಬಿಯೋರ್ ಗರಂಗ್ ಹೇಳಿದ್ದಾರೆ. ಭಾರತದ ಇಬ್ಬರ ಎಂಜಿನಿಯರ್‍ಗಳನ್ನು ನೈಲ್ ರಾಜ್ಯದಿಂದ ಅಪಹರಿಸಲಾಗಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin