ನೋಟ್ ಬ್ಯಾನ್ ನಂತರ ಮಧ್ಯಪ್ರದೇಶದಲ್ಲಿ 35,000 ಕೋಟಿ ರೂ. ರಹಸ್ಯ ಹಣ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Black-Money--01

ಭೋಪಾಲ್, ಮಾ.13-ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರ ಮಧ್ಯಪ್ರದೇಶದಲ್ಲಿ 60 ದಿನಗಳ ಒಳಗೆ 35,000 ಕೋಟಿ ರೂ.ಗಳಿಗೂ ಅಧಿಕ ರಹಸ್ಯ ಹಣ ಪತ್ತೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳು ಮತ್ತು ವ್ಯಕ್ತಿಗಳ ಲಾಕರ್‍ಗಳು ಹಾಗೂ 25 ಪ್ರಮುಖ ಬ್ಯಾಂಕ್‍ಗಳಲ್ಲಿ ಈ ಅಕ್ರಮ ಹಣವನ್ನು ಇಡಲಾಗಿತ್ತು.   ಬ್ಯಾಂಕ್‍ಗಳ ಖಾತೆಗಳಲ್ಲಿ ಪತ್ತೆಯಾಗಿರುವ ಭಾರೀ ಪ್ರಮಾಣದ ಹಣದಲ್ಲಿ ಶೇಕಡ 40ಕ್ಕಿಂತ ಹೆಚ್ಚು ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ತೀವ್ರ ನಿಗಾವಹಿಸಿದ್ದು, ತನಿಖೆಯನ್ನು ತೀವ್ರಗೊಳಿಸಿದೆ.

ಕಳೆದ ವರ್ಷ ನ.8ರಂದು ನೋಟು ರದ್ದತಿ ಜಾರಿಗೊಳಿಸಿದ ನಂತರ ಪ್ರಧಾನಮಂತ್ರಿ ಜನ್‍ಧನ್ ಯೋಜನೆಯ (ಪಿಎಂಜೆಡಿವೈ) ಖಾತೆಗಳ ಹಣವು 461 ಕೋಟಿಗಳಷ್ಟು ಹೆಚ್ಚಾಗಿದೆ (ನ.9ರಂದು 863 ಕೋಟಿ ರೂ.ಗಳಿಂದ ಜ.19ರಂದು 1,324 ಕೋಟಿ ರೂ.ಗಳಿಗೆ ಏರಿಕೆ). ಬಹಿರಂಗಗೊಳಿಸದ ನಗದನ್ನು ಠೇವಣಿಯಾಗಿಡಲು ಪಿಎಂಜೆಡಿವೈ ಮುಖ್ಯ ಮೂಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.   ಮಧ್ಯಪ್ರದೇಶ ರಾಜ್ಯದ 25 ಪ್ರಮುಖ ಬ್ಯಾಂಕ್‍ಗಳಲ್ಲಿ ನ.8 ರಂದು 2,47,372 ಕೋಟಿ ರೂ. ಸರಾಸರಿ ಠೇವಣಿ ಇತ್ತು. ಅದು ಜ.10ರ ವೇಳೆಗೆ 2,92,901 ಕೋಟಿ ರೂ.ಗಳಿಗೆ ಏರಿದ್ದು, 35,529 ಕೋಟಿ ರೂ.ಗಳ ರಹಸ್ಯ (ಅಘೋಷಿತ) ಹಣ ಪತ್ತೆಯಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಐಸಿಐಸಿಐ, ಎಚ್‍ಡಿಎಫ್‍ಸಿ, ಸಿಂಡಿಕೇಟ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಡಿಯಾ-ಈ 10 ಬ್ಯಾಂಕ್‍ಗಳಲ್ಲಿ ಗರಿಷ್ಠ ಠೇವಣಿ ಸಂಗ್ರಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin