ಪೊಲೀಸರೇ ಕಳ್ಳರಾದರೆ ಹೇಗೆ..? : ಮೇಲೇಶಿಯಾದಿಂದ ಬಂದ 3 ಕೆಜಿ ಚಿನ್ನ ಕದ್ದ ಸಬ್‍ಇನ್‍ಸ್ಪೆಕ್ಟರ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

Polcie-Gold--01

ಬೆಂಗಳೂರು,ಮಾ.13-ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಪ್ರಯಾಣಿಕರಿಗೆ ರಕ್ಷಣೆ ಕೊಡಬೇಕಾದ ಪೊಲೀಸರೇ ಕಳ್ಳತನ ಆರೋಪದಲ್ಲಿ ಸಿಕ್ಕಿಬಿದ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.   ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೇಲೇಶಿಯಾದಿಂದ ಮೂರು ಕೆಜಿ ಬಂಗಾರ ಕದಿದ್ದ ವಲಸೆ ವಿಭಾಗದ ಇಬ್ಬರು ಸಬ್‍ಇನ್‍ಸ್ಪೆಕ್ಟರ್‍ಗಳನ್ನು ಜಾಗೃತ ದಳದ ಅಧಿಕಾರಿಗಳು ಬಂಧಿಸಿದ್ದಾರೆ.   ವಲಸೆ ವಿಭಾಗದ ಸಬ್‍ಇನ್‍ಸೆಪಕ್ಟರ್‍ಗಳಾದ ಪಿ.ಡಿ.ಕಟ್ಕರ್ ಎಂಬುವರೇ ಬಂದಿದ್ದ ಆರೋಪಿಗಳು. ಸದ್ಯಕ್ಕೆ ಜಾಗೃತ ದಳದ ವಶದಲ್ಲಿರುವ ಈ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಘಟನೆ ಹಿನ್ನೆಲೆ:

ಬೆಂಗಳೂರು ಮೂಲದ ಅರ್ಜುನನ್ ವೇಲು ಮತ್ತು ಶಾಂತಿ ನಾರಾಯಣ್ ದಂಪತಿಗಳು ಮಲೇಶಿಯಾದಿಂದ ಭಾನುವಾರ ಬೆಳಗ್ಗೆ 9.10ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮಲೇಶಿಯಾದ ವಿಮಾನ(ವಿಮಾನ ಸಂಖ್ಯೆ ಎಂ.ಎಚ್.104)ದಲ್ಲಿ ಬಂದ ಈ ದಂಪತಿಗಳ ಬಳಿ ಮೂರು ಕೆಜಿ ಬಂಗಾರ ಹಾಗೂ 90 ಲಕ್ಷ ನಗದು ಇತ್ತು. ತಮ್ಮ ಲಗೇಜ್‍ಗಳನ್ನು ತಪಾಸಣೆಗೆ ಒಳಪಡಿಸಿದ ವೇಳೆ ಅನುಮಾನ ವ್ಯಕ್ತಪಡಿಸಿದ ವಲಸೆ ವಿಭಾಗದ ಅಧಿಕಾರಿಗಳು ಕೂಡಲೇ ವಶಕ್ಕೆ ಪಡೆದರು.

ವಿಚಾರಣೆ ಸಂದರ್ಭದಲ್ಲಿ ಇಷ್ಟು ಬಂಗಾರ ಹಾಗೂ ನಗದು ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸುವ ನೆಪದಲ್ಲಿ ಈ ಇಬ್ಬರು ಅಧಿಕಾರಿಗಳು ಅರ್ಜುನನ್ ವೇಲು ಬಳಿ ಇದ್ದ ಮೂರು ಕೆಜಿ ಬಂಗಾರ ಹಾಗೂ 90 ಲಕ್ಷ ನಗದನ್ನು ವಶಪಡಿಸಿಕೊಂಡು ಶೌಚಲಯದಲ್ಲಿ ಬಚ್ಚಿಟ್ಟಿದ್ದರು. ನಾವು ವಿಚಾರಣೆಗೆ ಕರೆದಾಗ ಬರಬೇಕೆಂದು ಹೇಳಿ ಅವರನ್ನು ಹೊರ ಕಳುಹಿಸಿದರು. ಅಧಿಕಾರಿಗಳ ಈ ನಡೆ ಅನುಮಾನಕ್ಕೆ ಕಾರಣವಾಗಿ ಕೂಡಲೇ ಜಾಗೃತ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.   ತಕ್ಷಣವೇ ಜಾಗೃತ ದಳದ ಒಂದು ತಂಡ ಸಬ್‍ಇನ್‍ಸ್ಪೆಕ್ಟರ್‍ಗಳಾದ ಪ್ರವೀಣ್‍ಕುಮಾರ್ ಪಿ.ಡಿ. ಕಟ್ಕರ್ ಅವರನ್ನು ವಿಚಾರಣೆಗೊಳಪಡಿಸಿದ ವೇಳೆ ಕದ್ದಿರುವುದನ್ನು ಒಪ್ಪಿಕೊಂಡರು.

ಶೌಚಾಲಯದಲ್ಲಿ ಬಚ್ಚಿಟ್ಟಿದ್ದ ಮೂರು ಕೆಜಿ ಬಂಗಾರ 90 ಲಕ್ಷ ನಗದನ್ನು ಜಾಗೃತ ದಳದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಮೂಲದ ಪ್ರಕಾರ ಪೊಲೀಸರು ಹೀಗೆ ಪ್ರಯಾಣಿಕರನ್ನು ಬೆದರಿಸಿ ವಶಪಡಿಸಿಕೊಳ್ಳುವ ಬಂಗಾರ ಮತ್ತು ಆಭರಣಗಳನ್ನು ಖರೀದಿಸಲು ವಿಮಾನ ನಿಲ್ದಾಣದಲ್ಲಿಯೇ ವ್ಯವಸ್ಥಿತ ಜಾಲವೊಂದು ಸದ್ದಿಲ್ಲದೆ ಕಾರ್ಯ ನಡೆಸುತ್ತದೆ ಎನ್ನಲಾಗಿದೆ.   ಇದೀಗ ಜಾಗೃತ ದಳದ ಅಧಿಕಾರಿಗಳು ಈ ಗ್ಯಾಂಗ್‍ನ ಮೇಲೆ ಕಣ್ಣಿಟ್ಟಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin