19 ವರ್ಷ ಬಳಿಕ ಪಾಕಿಸ್ತಾನದಲ್ಲಿ ಜನಗಣತಿ

ಈ ಸುದ್ದಿಯನ್ನು ಶೇರ್ ಮಾಡಿ

Pakistan--Census

ಇಸ್ಲಾಮಬಾದ್,ಮಾ.13- ನೆರೆಯ ರಾಷ್ಟ್ರ ಪಾಕಿಸ್ತಾನ19 ವರ್ಷದ ಬಳಿಕ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಜನಗಣತಿ ನಡಸಲು ಮುಂದಾಗಿದ್ದು , ಎರಡು ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸಲಿದ್ದಾರೆ.   ರಾಷ್ಟ್ರಾದ್ಯಂತ ಎರಡು ಹಂತಗಳಲ್ಲಿ ಜನಗಣತಿ ಸಮೀಕ್ಷೆ ನಡೆಯಲಿದ್ದು , ಮೇ 25ರೊಳಗೆ ಗಣತಿಯ ಸಮಗ್ರ ಕೆಲಸ ಮುಗಿಯಲಿದೆ. ಇದು 6ನೇ ಜನಗಣತಿ ಎಂದು ಮಿಲಿಟರಿ ವಕ್ತಾರ ಮೇಜರ್ ಜನರಲ್ ಅಶಿಫ್ ಗಫರ್ ಮತ್ತು ರಾಜ್ಯ ಮಾಹಿತಿ ಸಚಿವ ಮರಿಯಂ ಔರಾಂಗಜೇಬ್ ಅವರ ಒಂಟಿ ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಮನೆಯಿಂದ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದು , ಸಿಬ್ಬಂದಿಗಳ ಜೊತೆ ಮಿಲಿಟರಿ ಪಡೆಗಳು ಕೈ ಜೋಡಿಸಲಿವೆ. ಪ್ರತಿಯೊಂದು ಮಾಹಿತಿ ಸಂಗ್ರಹಿಸಲು ಮಿಲಟರಿ ಸಿಬ್ಬಂದಿಗಳ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಎಲ್ಲಾ ನಾಗರಿಕರು ಸಹಕಾರ ನೀಡಬೇಕೆಂದು ಅಶಿಫ್ ಗಫರ್ ತಿಳಿಸಿದ್ದಾರೆ.   ಮೊದಲನೇಯ ಹಂತದ ಜನಗಣತಿ ಸಮೀಕ್ಷೆ ಮಾಚ್ 15ರಿಂದ ಏಪ್ರಿಲ್ 15ರವರೆಗೆ ನಡೆಯಲಿದ್ದು , ಬಳಿಕ ಎರಡನೇ ಹಂತ ಸಮೀಕ್ಷೆಯಲ್ಲಿ ಏಪ್ರಿಲ್ 25ರಿಂದ ಮೇ 25ರವರೆಗೆ ನಡೆಯಲಿದೆ. ಈ ಸಮೀಕ್ಷೆ ನಡೆಸಲು ಸರ್ಕಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮರಿಯಂ ಔರಾಂಗಜೇಬ್ ತಿಳಿಸಿದ್ದಾರೆ.
1998ರಲ್ಲಿ ಪಾಕ್ ಜನಗಣತಿ ಸಮೀಕ್ಷೆ ನಡೆಸಿತ್ತು. ಆ ವರದಿಯ ಪ್ರಕಾರ ಅಲ್ಲಿನ ಜನಸಂಖ್ಯೆ 180 ದಶಲಕ್ಷದಷ್ಟಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin