ಅಮೆರಿಕದ ಅತ್ಯುನ್ನತ ಆರೋಗ್ಯ ಆರೈಕೆ ಹುದ್ದೆಗೆ ಭಾರತ ಮೂಲದ ಸೀಮಾ ವರ್ಮಾ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Seema-Varma-Trump

ವಾಷಿಂಗ್ಟನ್, ಮಾ.14-ಭಾರತೀಯ ಮೂಲದ ಸೀಮಾ ವರ್ಮಾ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಅತ್ಯುನ್ನತ ಆರೋಗ್ಯ ಆರೈಕೆ ಹುದ್ದೆಗಾಗಿ ಅಮೆರಿಕ ಸೆನೆಟ್ ಆಯ್ಕೆ ಮಾಡಿದೆ. ಈ ಹಿಂದೆ ಜಾರಿಯಲ್ಲಿದ್ದ ಒಬಾಮಾಕೇರ್ ಆರೋಗ್ಯ ಸೇವಾ ಸೌಲಭ್ಯವನ್ನು ರದ್ದುಗೊಳಿಸುವ ಮತ್ತು ಬದಲಿಸುವ ಸರ್ಕಾರದ ಯತ್ನದಲ್ಲಿ ಸೀಮಾ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.   ಸೀಮಾ ವರ್ಮಾ ಆಯ್ಕೆಯನ್ನು ಅಮೆರಿಕ ಸೆನೆಟ್ 55-43 ಮತಗಳಿಂದ ಖಚಿತಗೊಳಿಸಿದೆ. ಈ ಹುದ್ದೆಯನ್ನು ಅಲಂಕರಿಸಲಿರುವ ಭಾರತ ಮೂಲದ ಪ್ರಥಮ ಅಮೆರಿಕ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವರ್ಮಾ ಅವರನ್ನು ಪ್ರಶ್ನಾತೀತ ಸಮರ್ಥ ಮಹಿಳೆ ಎಂದು ಶ್ವೇತಭವನ ಬಣ್ಣಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin