ಕಾರು ಪಲ್ಟಿ : ಸ್ಥಳದಲ್ಲೇ  ಓರ್ವ ಸಾವು, ಮೂವರು ತೀವ್ರ ಗಾಯ 

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಮಾ.11-ಕಾರು ಪಲ್ಟಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ತೀವ್ರ ಗಾಯಗೊಂಡಿರುವ ಘಟನೆ ತಾಲೂಕಿನ ಬಿಳಿ ದೇಗಲು ಗ್ರಾಮದ ಸಮೀಪ ನಡೆದಿದೆ.ತಾಲೂಕಿನ ಚಂದಗಾಲು ಗ್ರಾಮದ ನಿವಾಸಿ ಗುರು (35) ಮೃತಪಟ್ಟ ದುರ್ದೈವಿ.ಹರೀಶ್, ಚೇತನ್ ಮತ್ತು ಮಂಜು ತೀವ್ರ ಗಾಯಗೊಂಡವರು. ಇವರು ಸ್ವಿಫ್ಟ್ ಕಾರಿನಲ್ಲಿ ಬಸರಾಳು ಸಮೀಪದ ಮದನಟ್ಟಿ ಗ್ರಾಮಕ್ಕೆ ಊಟಕ್ಕೆ ತೆರಳಿದ್ದರು.ಊಟ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಬಿಳಿದೇಗಲು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದ್ದು, ಗುರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹರೀಶ್, ಚೇತನ್ ಹಾಗೂ ಮಂಜು ತೀವ್ರ ಗಾಯಗಳಾಗಿ ಮಂಡ್ಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಸಂಬಂಧ ಕೆರೆಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin