ಪ್ರೀತ್ ಭರಾರ್‍ರ ವಜಾ ನಿರ್ಧಾರವನ್ನು ಸಮರ್ಥಿಸಿಕೊಂಡ ಶ್ವೇತಭವನ

ಈ ಸುದ್ದಿಯನ್ನು ಶೇರ್ ಮಾಡಿ

Preeth

ವಾಷಿಂಗ್ಟನ್, ಮಾ.14-ಭಾರತ ಮೂಲದ ಪ್ರಾಸಿಕ್ಯೂಟರ್ ಪ್ರೀತ್ ಭರಾರ್ ವಜಾ ಮತ್ತು 45 ಅಟಾರ್ನಿ ಜನರಲ್‍ಗಳ ರಾಜೀನಾಮೆ ಪಡೆಯುವ ನಿರ್ಧಾರವನ್ನು ಟ್ರಂಪ್ ಸರ್ಕಾರ ಸಮರ್ಥಿಸಿಕೊಂಡಿದೆ.  ನೂತನ ಆಡಳಿತ ಬಂದಾಗ ಸರ್ಕಾರವು ಸಾಮಾನ್ಯ ಕಾರ್ಯನಿರ್ವಹಣಾ ವಿಧಾನದ ಮೂಲಕ ಅಧಿಕಾರಿಗಳ ರಾಜೀನಾಮೆ ಕೇಳುತ್ತೇವೆ. ಅದರಂಥೆ ಟ್ರಂಪ್ ಆಡಳಿತ ಕೂಡ ಇದನ್ನೇ ಮಾಡಿದೆ. ಇದರಲ್ಲಿ ತಪ್ಪೇನೂ ಇಲ್ಲ ಎಂದು ಶ್ವೇತಭವನ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ವೈಪರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಪ್ರೀತ್ ಭರಾರ್ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆದರೆ ನಿಮ್ಮ ಸರ್ಕಾರ ಅವರನ್ನು ವಜಾ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೊಸ ಸರ್ಕಾರ ರಚನೆಯಾದಾಗ ಆಡಳಿತದಲ್ಲಿ ಏಕರೂಪತೆ ತರಲು ಅಧಿಕಾರಿಗಳ ರಾಜೀನಾಮೆ ಕೇಳಲಾಗಿದೆ. ಈ ರೀತಿ ನಡೆಯುತ್ತಿರುವುದು ಇದೇ ಮೊದಲಲ್ಲ. ಜಾರ್ಜ್ ಬುಷ್, ಬರಾಕ್ ಒಬಾಮಾ ಕೂಡ ಅಧ್ಯಕ್ಷರಾಗಿದ್ದಾಗ ಇದನ್ನೇ ಮಾಡಿದೆ ಎಂದು ಹೇಳಿದರು.  ಬರಾಕ್ ಒಬಾಮಾ ಅವರ ಆಡಳಿತ ಅವಧಿಯಲ್ಲಿ ಭರಾರ್ ಸೇರಿದಂತೆ 45 ಅಟಾರ್ನಿ ಜನರಲ್‍ಗಳನ್ನು ನೇಮಕ ಮಾಡಿಕೊಂಡಿತ್ತು. ನ್ಯೂಯಾರ್ಕ್ ಪ್ರಾಸಿಕ್ಯೂಟರ್ ಹುದ್ದೆಯಿಂದ ಕಿತ್ತು ಹಾಕುವ ಮೊದಲು ಡೊನಾಲ್ಡ್ ಟ್ರಂಪ್ ಪ್ರೀತ್ ಭರಾರ್‍ಗೆ ಕರೆ ಮಾಡಿದ್ದರು. ಆದರೆ ಈ ಕರೆಯನ್ನು ಸ್ವೀಕರಿಸಲಿಲ್ಲ.

ನಿನ್ನೆ ಭರಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಐ ಲವ್ ನ್ಯೂಯಾರ್ಕ್. ಇದು ಉತ್ತಮ ಪ್ರಾಸಿಕ್ಯೂಟರ್ ಕಚೇರಿ ಎಂದು ಬಣ್ಣಿಸಿ ವಿದಾಯದ ನುಡಿಗಳಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin