ಭಾರತೀಯ ಮಹಿಳೆ ವಾಗ್ಬಾಣಕ್ಕೆ ಅಮೆರಿಕ ಶ್ವೇತಭವನ ಕಾರ್ಯದರ್ಶಿ ತಬ್ಬಿಬ್ಬು..! (Viral Video)
ವಾಷಿಂಗ್ಟನ್, ಮಾ.14-ನಿರಂಕುಶ ಪ್ರಭುತ್ವ ಹಾಗೂ ದಬ್ಬಾಳಿಕೆ ನಡೆಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಕೆಲಸ ಮಾಡುವಾಗ ನಿಮ್ಮ ಅನುಭವ ಹೇಗಿತ್ತು ? ದೇಶವನ್ನು ನಾಶಗೊಳಿಸುತ್ತಿರುವಾಗ ನಿಮ್ಮ ಪ್ರತಿಕ್ರಿಯೆ ಏನು?-ಇವು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸೀನ್ ಸ್ಪೈಸರ್ ಅವರಿಗೆ ಭಾರತೀಯ ಮೂಲದ ಮಹಿಳೆ ತೂರಿಬಿಟ್ಟ ಪ್ರಶ್ನೆಗಳು, ಈ ವಾಗ್ಬಾಣದಿಂದ ವೈಟ್ಹೌಸ್ ಪ್ರೆಸ್ ಸೆಕ್ರೆಟರಿ ಕೆಲಕ್ಷಣ ತಬ್ಬಿಬ್ಬಾದರು. ಸ್ಥಳೀಯ ಆ್ಯಪಲ್ ಸ್ಟೋರ್ನಲ್ಲಿ ಸ್ಪೈಸರ್ ಅವರನ್ನು ಅಟಕಾಯಿಸಿಕೊಂಡ ಶ್ರೀ ಚೌಹಾಣ್ ಎಂಬ 33 ವರ್ಷದ ಮಹಿಳೆ ಪ್ರಶ್ನೆಗಳ ಸುರಿಮಳೆಗಳೆದರು. ಈ ಮೇಲಿನ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಿದಾಗ ಶ್ವೇತಭವನ ಕಾರ್ಯದರ್ಶಿ ಗಲಿಬಿಲಿಗೊಂಡರು.
Asking @PressSec questions in Apple Store since he doesn't like the press. https://t.co/l493z2gG4x
— Shree ✊?❤️?? (@shreec) March 11, 2017
ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ ಮಹಿಳೆ ಅಮೆರಿಕ ಅಧ್ಯಕ್ಷರನ್ನು ಗಲಭೆ ಮತ್ತು ದೊಂಬಿಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಮಹಿಳೆಯ ಪ್ರಶ್ನೆಯಿಂದ ಕೆಲಕಾಲ ಗೊಂದಲಕ್ಕೊಳಗಾದರೂ, ಪ್ರೆಸ್ ಸೆಕ್ರೆಟರಿ ಶಾಂತ ಮತ್ತು ಸಮಯಪ್ರಜ್ಞೆಯಿಂದ ವರ್ತಿಸಿದರು, ಇದೊಂದು ದೊಡ್ಡ ದೇಶ, ನೀವು ಇಲ್ಲಿರಲು ಅವಕಾಶ ನೀಡಿದೆ ಎಂದು ಜಾಣ್ಮೆಯಿಂದ ಉತ್ತರಿಸಿ ಜಾರಿಕೊಂಡರು. ನಂತರ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಮುಕ್ತ ದೇಶ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಜನರಿಗೆ ಸ್ವಾತಂತ್ರವಿದೆ ಎಂದು ತಿಳಿಸಿದರು. ಚೌಹಾಣ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ ಸಾಕಷ್ಟು ಸುದ್ದಿ ಮಾಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS