ಮಹಿಳೆ- ಮಕ್ಕಳ ಹೋಳಿ ಸಂಭ್ರಮಕ್ಕೆ ವುಮೇನಿಯಾ

ಈ ಸುದ್ದಿಯನ್ನು ಶೇರ್ ಮಾಡಿ

15

ಬೆಳಗಾವಿ,ಮಾ.13– ಸಂಸಾರದ ಜಂಜಟ ಮರೆತು ಮಹಿಳೆಯರು ಮತ್ತು ಮಕ್ಕಳು ಹೋಳಿ ಸಂಭ್ರಮಿಸಲು ವುಮೇನಿಯಾ ಆಯೋಜನೆ ಮಾಡಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸಿಪಿಎಡ್ ಮೈದಾನದಲ್ಲಿ ಇಂದು ನಡೆಯುವ ವುಮೇನಿಯಾ ಹೋಳಿ ಆಚರಣೆಯ ಪೂರ್ವಸಿದ್ದತೆ ಪರಿಶೀಲನೆ ಮಾಡಿ ಮಾತನಾಡಿದ ಅವರು, ಹೋಲಿ ಆಚರಣೆಯಲ್ಲಿ ಎಂಟಿವಿ ನಾಗ್ಡಾ, ನೈತಿಕ್ ನಾಗ್ಡಾ ಮತ್ತು ತಂಡದ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಕ್ಕಳಿಗೆ ಕೃತಕ ಕಾರಂಜಿ, ಮಹಿಳೆಯರಿಗೆ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು. ಮಹಿಳೆಯರಿಗಾಗಿ ಆಯೋಜಿಸಿರುವ ವುಮೇನಿಯಾ ಹೋಲಿಯಲ್ಲಿ ನಗರದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹೆಬ್ಬಾಳಕರ ಕೋರಿದ್ದಾರೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin