ವಿದ್ಯುತ್ ಕಂಬ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದು ಇಬ್ಬರು ಗುತ್ತಿಗೆ ಕಾರ್ಮಿಕರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ ,ಮಾ.14- ವಿದ್ಯುತ್ ಕಂಬಗಳನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಇಬ್ಬರು ಗುತ್ತಿಗೆ ಕಾರ್ಮಿಕರು ಮೃತ ಪಟ್ಟಿರುವ ಘಟನೆ ಕಾವೇರಿ ನಗರದ ಸಮೀಪ ನಡೆದಿದೆ. ತಾಲ್ಲೂಕಿನ ಹೊಳಲು ಗ್ರಾಮದ ನಿವಾಸಿ ಸುರೇಶ್ (45) ಹಾಗೂ ಶ್ರೀರಂಗ ಪಟ್ಟಣ ತಾಲ್ಲೂಕಿನ ಚೊಕ್ಕನಹಲ್ಳಿ ಗ್ರಾಮದ ನಿವಾಸಿ ತಿಮ್ಮೇಗೌಡ (55) ಮೃತಪಟ್ಟ ದುರ್ದೈವಿಗಳು.  ವಿದ್ಯಾನಗರದಲ್ಲಿ ವಿದ್ಯುತ್ ಕಂಬಗಳನ್ನು ನೆಡುವ ಗುತ್ತಿಗೆಯನ್ನು ಪದ್ಮಾ ಎಲೆಕ್ಟ್ರಿಕಲ್ಸ್ಸ್ ಮಾಲೀಕ ಅನಂತು ಪಡೆದಿದ್ದು, ಕಂಬಗಳನ್ನು ವಿದ್ಯಾನಗರಕ್ಕೆ ಸಾಗಿಸುತ್ತಿದ್ದಾಗ ಟ್ರ್ಯಾಕ್ಟರ್ ಮುಂದಿನ ಟೈರ್‍ಗಳು ಸ್ಫೋಟಗೊಂಡು ಅಡ್ಡಾದಿಡ್ಡಿ ಚಲಿಸಿದ ಪರಿಣಾಮ 8ರಿಂದ 10 ವಿದ್ಯುತ್ ಕಂಬಗಳು ಉರುಳಿದೆ ದರಡಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಚಾಲಕ ಪರಾರಿಯಾಗಿದ್ದು, ಗುತ್ತಿಗೆ ದಾರ ತಲೆ ಮರೆಸಿಕೊಂಡಿದ್ದಾನೆ. ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin