ಜೆಡಿಎಸ್ ಕಾರ್ಯಕರ್ತರ ಕೊಲೆ ಪ್ರಕರಣ : ಜೀವ ಬೆದರಿಕೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಮಾ.15- ಜೆಡಿಎಸ್ ಕಾರ್ಯಕರ್ತರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿರುವ ಪ್ರಸನ್ನನ ಸ್ನೇಹಿತರಿಬ್ಬರು ನನಗೆ ಜೀವ ಬೆದರಿಕೆ ಹಾಕಿದ್ದಾರೆಂದು ಕೊತ್ತನಹಳ್ಳಿ ನಿವಾಸಿ ಹೊನ್ನಯ್ಯ ಎಂಬುವರು ಮದ್ದೂರು ಠಾಣೆಗೆ ದೂರು ನೀಡಿದ್ದಾರೆ. ನಾನು ಗದ್ದೆಗೆ ಹೋಗುವಾಗ ಪ್ರಸನ್ನನ ಸ್ನೇಹಿತ ಕುಮಾರ್ ನನ್ನನ್ನು ಅಡ್ಡಗಟ್ಟಿ ಕೊಲೆ ಬೆದರಿಕೆ ಹಾಕಿದ್ದಾನೆ. ಪ್ರಸನ್ನ ಜೈಲಿಗೆ ಹೋಗಲು ನೀನೇ ಕಾರಣ ಎಂದು ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ರಾತ್ರಿ ಬಹಿರ್ದೆಸೆಗೆ ಹೋಗಿದ್ದಾಗ ಅಶೋಕ್ ಎಂಬಾತ ನನ್ನ ಮೇಲೆ ಮಚ್ಚನ್ನು ಬೀಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin