ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಂಪೆರೆದ ಮಳೆಯ ಸಿಂಚನ

ಈ ಸುದ್ದಿಯನ್ನು ಶೇರ್ ಮಾಡಿ

Rain-Karnataka

ಬೆಂಗಳೂರು, ಮಾ.16– ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇಂದೂ ಸಹ ಚಿತ್ರದುರ್ಗ, ಹಾಸನ, ಕಲ್ಬುರ್ಗಿ ಮತ್ತಿತರೆಡೆ ಮಳೆಯ ಸಿಂಚನವಾಗಿ ಭೂಮಿಗೆ ತಂಪೆರೆದಿದೆ.

ಚಿತ್ರದುರ್ಗ:
ಬೆಳ್ಳಂ ಬೆಳಗ್ಗೆಯೇ ಕೆಲವೆಡೆ ಮಳೆಯಾಗಿದ್ದು, ಕೆಲವೆಡೆ ತುಂತುರು ಮಳೆ ಬಂದಿದೆ. ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದಿದ್ದ ಮಳೆ ಇಂದು ಬೆಳಗ್ಗೆ ಮತ್ತೆ ಆರಂಭವಾಗಿದೆ. ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆಯ ಸಿಂಚನದಿಂದ ಸಂತಸ ಮೂಡಿಸಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಬಿಸಿಲ ಝಳದಲ್ಲೂ ವರುಣನ ಕೃಪೆಗೆ ಭೂಮಿ ತಂಪಾಗಿದೆ.

ಕಲ್ಬುರ್ಗಿ:

ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಯಿಂದಾಗಿ ದ್ರಾಕ್ಷಿ ಸೇರಿದಂತೆ ಇನ್ನಿತರ ಬೆಳೆಗಳು ನೆಲ ಕಚ್ಚಿವೆ.

ವಿಜಯಪುರ:

ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಅಪಾರವಾದ ಬೆಳೆ ಹಾನಿ ಉಂಟಾಗಿದ್ದು, ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ. ಸಿಂದಗಿ ತಾಲ್ಲೂಕಿನಾದ್ಯಂತ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ಹೆರನಾಳ, ಓತಿಹಾಳ ಗ್ರಾಮದಲ್ಲಿ ಬೆಳೆದ ದ್ರಾಕ್ಷಿ, ಬಾಳೆ, ನಿಂಬೆ ಬೆಳೆಗಳು ಹಾನಿ ಉಂಟಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin