ವಲಸೆ ನಿರ್ಬಂಧ ತಡೆ ವಿರುದ್ಧ ಸುಪ್ರೀಂನಲ್ಲಿ ಸುಪ್ರೀಂಕೋರ್ಟ್‍ನಲ್ಲಿ ಹೋರಾಡುತ್ತೇನೆ : ಟ್ರಂಪ್ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Trump--01

ನಾಶ್‍ವಿಲ್ಲೆ (ಅಮೆರಿಕ), ಮಾ.16-ಆರು ಮುಸ್ಲಿಂ ದೇಶಗಳ ನಿರಾಶ್ರಿತರು ಮತ್ತು ಪ್ರಜೆಗಳಿಗೆ ತಾತ್ಕಾಲಿಕ ನಿರ್ಬಂಧ ಹೇರುವ ತಮ್ಮ ಪರಿಷ್ಕೃತ ಆದೇಶಕ್ಕೆ ತಡೆ ನೀಡಿರುವ ಫೆಡರಲ್ ನ್ಯಾಯಾಲಯವೊಂದರ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಹೋರಾಟ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ. ವಲಸೆ ನಿರ್ಬಂಧಿಸುವ ಟ್ರಂಪ್‍ರ ಹೊಸ ಕಾರ್ಯಕಾರಿ ಅದೇಶಕ್ಕೆ ಹವಾಯಿಯ ಫೆಡರಲ್ ಕೋರ್ಟ್ ಮುಟ್ಟುಗೋಲು ಹಾಕಿತ್ತು. ಇದರಿಂದ ಕೆಂಡಾಮಂಡಲವಾಗಿರುವ ಅಧ್ಯಕ್ಷರು, ಇದು ನ್ಯಾಯಾಂಗದ ದೌರ್ಜನ್ಯದ ಪರಮಾವಧಿ ಎಂದು ಟೀಕಿಸಿದ್ದಾರೆ.

ನಮ್ಮ ರಾಷ್ಟ್ರದ ಭದ್ರತೆಯ ಹಿತದೃಷ್ಟಿಯೀಂದ ಆರು ಮುಸ್ಲಿಂ ದೇಶಗಳ ಪ್ರಜೆಗಳ ವಲಸೆ ನಿರ್ಬಂಧಿಸಲು ಅಧ್ಯಕ್ಷರಿಗೆ ಸಂವಿಧಾನದ ಕಾನೂನಿನಲ್ಲಿ ಅಧಿಕಾರ ಪ್ರದತ್ತವಾಗಿದೆ. ಆದರೂ ಹವಾಯಿ ಫೆಡರಲ್ ನ್ಯಾಯಾಲಯದ ಈ ಕ್ರಮ ಸಂವಿಧಾನ ವಿರೋಧಿ ಎಂದು ಟೆನ್ನೆಸ್ಸಿಯಲ್ಲಿನ ನಾಶ್‍ವಿಲ್ಲೆಯಲ್ಲಿ ಇಂದು ನಡೆದ ಸಾರ್ವಜನಿಕ ರ್ಯಾಲಿಯೊಂದರಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್‍ನಲ್ಲಿ ಹೋರಾಡುವುದಾಗಿ ಟ್ರಂಪ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin