ವಿಧಾನಸೌಧದಲ್ಲಿ ಜೇನುನೊಣಗಳ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha--01

ಬೆಂಗಳೂರು, ಮಾ.16- ಶಕ್ತಿಸೌಧ ವಿಧಾನಸೌಧದಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಜೇನುನೊಣಗಳು ದಾಳಿ ಮಾಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಜೇನು ನೊಣಗಳ ಕಾಟದಿಂದ ಪೊಲೀಸರು ಮುಖ ಮುಚ್ಚಿಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ವಿಧಾನಸೌಧದ ಕಟ್ಟಡದ ಮೂಲೆಯಲ್ಲಿ ಗೂಡುಕಟ್ಟಿರುವ ಜೇನು ಹುಳುಗಳು ದಿಢೀರನೆ ಅಲ್ಲಿದ್ದ ಪೊಲೀಸರ ಮೇಲೆ ದಾಳಿ ಮಾಡಿದ್ದು, ಇವುಗಳಿಂದ ತಪ್ಪಿಸಿಕೊಳ್ಳಲು ಸ್ವಲ್ಪಹೊತ್ತು ಹೆಣಗಾಡಿದರು. ಈ ಹಿಂದೆ ಹೆಗ್ಗಣ, ಇಲಿ, ಸೊಳ್ಳೆ, ಹಾವುಗಳ ಕಾಟದಿಂದ ಸುದ್ದಿಯಾಗಿದ್ದ ವಿಧಾನಸೌಧ ಇದೀಗ ಜೇನುನೊಣಗಳ ಕಾಟಕ್ಕೆ ಮತ್ತೆ ಸುದ್ದಿಯಾಗಿರುವುದು ವಿಪರ್ಯಾಸ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin