ಶ್ರೀದೇವಿ ಈಗ ‘ಮಾಮ್’..!

ಈ ಸುದ್ದಿಯನ್ನು ಶೇರ್ ಮಾಡಿ

9

ಒಂದು ಕಾಲದಲ್ಲಿ ಹಿಂದಿ ಚಿತ್ರರಂಗದ ಸಾಮ್ರಾಜ್ಞಿಯಾಗಿ ಮೆರೆದಿದ್ದ ಶ್ರೀದೇವಿ ಐದು ವರ್ಷಗಳ ಬಳಿಕ ಬಾಲಿವುಡ್‍ಗೆ ಹಿಂದಿರುಗಿದ್ದಾರೆ. ಇಂಗ್ಲಿಷ್ ಕಂಗ್ಲಿಷ್ ಸಿನಿಮಾ ಮೂಲಕ ಗಮನಸೆಳೆದಿದ್ದ ಶ್ರೀದೇವಿ ಈಗ ಮಾಮ್ ಎಂಬ ಚಿತ್ರದಲ್ಲಿ ಅತ್ಯಂತ ಸವಾಲಿನ ಪಾತ್ರವನ್ನು ನಿಭಾಯಿಸಲಿದ್ದಾರೆ. ಇಂಗ್ಲಿಷ್ ಕಂಗ್ಲಿಷ್ ಸಿನಿಮಾದಲ್ಲಿ ಆಕೆ ಗೃಹಿಣಿ, ಉದ್ಯಮಿ ಮತ್ತು ತಾಯಿಯಾಗಿ ನಟಿಸಿದ್ದರು. ಕೆಲಕಾಲದ ಅಂತರದ ಬಳಿಕ ಅವರು ಮತ್ತೊಮ್ಮೆ ತಾಯ್ತನದ ಪಾತ್ರದಲ್ಲಿ ಸತ್ವಪೂರ್ಣ ಅಭಿನಯ ನೀಡಲಿದ್ದಾರೆ. ಮಾಮ್ ಚಿತ್ರದ ಫಸ್ಟ್‍ಲುಕ್‍ನನ್ನು ಸ್ವತಃ ಶ್ರೀದೇವಿಯವರೇ ಅಭಿಮಾನಿಗಳಿಗಾಗಿ ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ರೀದೇವಿ ಪರಿಪೂರ್ಣ ಜವಾಬ್ದಾರಿಯುತ ಮಾತೆಯಂತೆ ಕಾಣುತ್ತಿರುವ ಪೋಸ್ಟರ್‍ನಲ್ಲಿ ಭಾರತದ ವಿವಿಧ ಭಾಷೆಯ ಪದಗಳು ಹರಡಿವೆ. ಅಷ್ಟೂ ಭಾಷೆಗಳ ಅಕ್ಷರಗಳಿದ್ದರೂ ಅವುಗಳ ಅರ್ಥ ಒಂದೇ. ಅದು ಮಾತೆ ಅಲ್ಲದೇ ಮತ್ತೇನು ? ನಟಿಯಾಗಿ, ಗೃಹಿಣಿಯಾಗಿ, ತಾಯಿಯಾಗಿ ಹಾಗೂ ಸಂಸಾರದ ಹೊಣೆ ನಿಭಾಯಿಸುವ ಮಹಿಳೆಯೂ ಆಗಿರುವ ಶ್ರೀದೇವಿಗೆ ಈ ಪಾತ್ರ ಒಂದು ರೀತಿಯ ಸವಾಲಿನದ್ದಾಗಿದೆ. ಶ್ರೀದೇವಿ ಮತ್ತು ಚಿತ್ರದ ಹೆಸರು ಮಾಮ್ ಎಂಬುದನ್ನು ಹೊರತುಪಡಿಸಿದರೆ ಸಿನಿಮಾದ ಉಳಿದ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಲಭಿಸಿಲ್ಲ. ಒಟ್ಟಾರೆ ಈ ಸಿನಿಮಾ ಮೂಲಕ ಶ್ರೀದೇವಿ ತಾವು ಒಬ್ಬ ಪ್ರಬುದ್ಧ ಅಭಿನೇತ್ರಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin