ತಂದೆಯ ಕಣ್ಣೆದುರೇ ಪುತ್ರಿಯರ ಮೇಲೆ ಗ್ಯಾಂಗ್ರೇಪ್ ..!
ದಹೂಡ್(ಗುಜರಾತ್), ಮಾ.17-ತಂದೆಯ ಕಣ್ಣ ಮುಂದೆಯೇ ಇಬ್ಬರು ಬಾಲಕಿಯರ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಗುಜರಾತ್ನ ದಹೂಡ್ ಜಿಲ್ಲೆಯ ದೇವಗಢ ಬಾರಿಯಾ ತಾಲ್ಲೂಕಿನಲ್ಲಿ ನಡೆಸಿದೆ. ಈ ಕೃತ್ಯ ಎಸಗಿದ ಆರು ಮಂದಿಯಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ದೂರು ನೀಡಿದ ಪ್ರಕರಣವೊಂದಕ್ಕೆ ಪ್ರತೀಕಾರವಾಗಿ ಈ ಕುಕೃತ್ಯ ಎಸಗಲಾಗಿದೆ. ಕುಮಾರ್ ಬಾರಿಯಾ, ಗೋಪ್ಸಿನ್ ಬಾರಿಯಾ ಮತ್ತು ಇತರ ನಾಲ್ವರು ಆರೋಪಿಗಳು ತಂದೆ ಮತ್ತು ಇಬ್ಬರು ಅಪ್ರಾಪ್ರ ಹೆಣ್ಣುಮಕ್ಕಳನ್ನು ಅಪಹರಿಸಿದ್ದರು.
ಚಲಿಸುತ್ತಿರುವ ವಾಹನದಲ್ಲೇ ಬಾಲಕಿಯರ ಮೇಲೆ ಈ ಗ್ಯಾಂಗ್ರೇಪ್ ನಡೆದಿದೆ. ವಾಹನದಲ್ಲಿ ಕೃತ್ಯ ನಡೆದಾದ ದುಷ್ಕರ್ಮಿಗಳ ಸಹಚರರು ನಾಲ್ಕು ಬೈಕ್ಗಳಲ್ಲಿ ಕಾರನ್ನು ಹಿಂಬಾಲಿಸಿ ಕಾಮುಕರಿಗೆ ರಕ್ಷಣೆ ನೀಡಿದ್ದರು. ಕೃತ್ಯದ ಬಗ್ಗೆ ದೂರು ನೀಡದಂತೆ ಬೆದರಿಸಿ ಗ್ರಾಮವೊಂದರ ಬಳಿ ತಂದೆ ಮತ್ತು ಮಕ್ಕಳನ್ನು ಇಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಒಟ್ಟು 13 ಜನರು ಷಾಮೀಲಾಗಿದ್ದು, ಐವರನ್ನು ಬಂಧಿಸಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS