ತಾಂತ್ರಿಕ ಸಮಸ್ಯೆಯಿಂದ ಆರ್‍ಟಿಪಿಎಸ್‍ನ ನಾಲ್ಕು 4 ಘಟಕಗಳು ಸ್ಥಗಿತ

ಈ ಸುದ್ದಿಯನ್ನು ಶೇರ್ ಮಾಡಿ

RTPS-01

ರಾಯಚೂರು, ಮಾ.17- ತಾಂತ್ರಿಕ ಸಮಸ್ಯೆಯಿಂದ ಶಕ್ತಿನಗರ ಆರ್‍ಟಿಪಿಎಸ್‍ನ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. 3, 4, 6 ಮತ್ತು 8ನೇ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದ್ದರಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದ್ದು, ಕೇವಲ 4 ಘಟಕಗಳಲ್ಲಿ 760 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಕಳೆದ ತಡರಾತ್ರಿಯಿಂದ ಘಟಕಗಳು ಸ್ಥಗಿತಗೊಂಡಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ಅಡಚಣೆಯಾಗಿದೆ. ಮಧ್ಯಾಹ್ನದ ನಂತರ ಘಟಕಗಳನ್ನು ದುರಸ್ತಿಗೊಳಿಸಿ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin