ನಾಳೆ ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

Vijaya-Hazare-Trophy

ರಾಂಚಿ,ಮಾ.17-ಕ್ರಿಕೆಟ್ ಆಟಗಾರರು ತಂಗಿದ್ದ ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್‍ನ 2ನೇ ಪಂದ್ಯವು ಮುಂದೂಡಲಾಗಿದ್ದು, ನಾಳೆ ದೆಹಲಿಯ ಫೀರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಂದ್ಯ ನಡೆಯಲಿದೆ.   ದೆಹಲಿಯ ಪಾಲಮ್ ಕ್ರೀಡಾಂಗಣದಲ್ಲಿ ಇಂದು ಬೆಂಗಾಲ್ ಮತ್ತು ಜಾರ್ಖಂಡ್ ನಡುವೆ ಸೆಮಿಫೈನಲ್‍ನ 2ನೇ ಪಂದ್ಯ ನಡೆಯಬೇಕಿತ್ತು. ಆದರೆ ಆಟಗಾರರು ತಂಗಿದ್ದ ಹೋಟೆಲ್‍ಗೆ ಬೆಂಕಿ ಕಾಣಿಸಿರುವುದರಿಂದ ಇಂದಿನ ಪಂದ್ಯವನ್ನು ನಾಳೆಗೆ ಮುಂದೂಡಲಾಗಿದ್ದು, ಇದೇ 19ರಂದು ನಡೆಯಬೇಕಿದ್ದ ಫೈನಲ್ ಪಂದ್ಯವನ್ನು 20ಕ್ಕೆ ಮೂಂದೂಡಲಾಗಿದೆ.

ಇಂದು ಬೆಳಗ್ಗೆ ದ್ವಾರಕದ ಫೈವ್ ಸ್ಟಾರ್ ಹೋಟೆಲ್‍ನ ಕೆಳಮಹಡಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಧೋನಿ ಸೇರಿದಂತೆ ತಂಡದ ಎಲ್ಲ ಆಟಗಾರರು ಹೋಟೆಲ್‍ನ 7ನೇ ಮಹಡಿಯ ರೂಮ್‍ನಲ್ಲಿ ತಂಗಿದ್ದರು. ಬೆಂಕಿಯ ದಟ್ಟ ಹೊಗೆ ಹೋಟೆಲ್‍ನ್ನೆಲ್ಲ ಆವರಿಸಿದ್ದಾಗ ಕೂಡಲೇ ಎಚ್ಚೆತ್ತುಕೊಂಡ ಆಟಗಾರರು ಹೊರಗೋಡಿ ಬಂದರು. ಆದರೆ ಆಟಗಾರರ ಕಿಟ್ ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin